ಮೊಬೈಲ್‌ನಲ್ಲಿ ಸೆರೆಯಾಯ್ತು ಹಾವು ಮುಂಗುಸಿ ಕಾದಾಟ : ವೈರಲ್ಲಾಗ್ತಿದೆ ವಿಡಿಯೋ

ಹುಬ್ಬಳ್ಳಿ :  ಹಾವು ಮುಂಗುಸಿ ಕಾದಾಟ ನೋಡಲು ಸಿಗುವುದು ಅಪರೂಪ. ಆದರೆ ಅಂತ ಅಪರೂಪದ ಹಾವು ಮುಂಗುಸಿ ಕಾದಾಟದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿ ಹಾವು ಹಾಗೂ ಮುಂಗುಸಿ ಕಾದಾಡಿಕೊಂಡಿವೆ. ಹಾವು ಮತ್ತು ಮುಂಗುಸಿ ಪೊದೆಯೊಂದರಲ್ಲಿ ಕಾದಾಟದ ಅಪರೂಪದ ದೃಶ್ಯವನ್ನ ಸ್ಥಳಿಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸುಮಾರು ಗಂಟೆಗಳ ಕಾಲ ನಡೆದ ಹಾವು ಮತ್ತು ಮುಂಗುಸಿ ಕಾದಾಟ ನಡೆಸಿ ಸಖತ್ ಮನರಂಜನೆ ನೀಡಿವೆ. ಕೊನೆಗೆ ಮುಂಗುಸಿ ಹಾವಿನ ಹೆಡೆಯನ್ನು ಹಿಡಿದು ಪೊದೆಯೊಳಗೆ ಸೇರಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಹರಿಬಿಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com