ಮೈಸೂರು : ಸೇತುವೆಗೆ ಡಿಕ್ಕಿಯಾದ ಇನೋವಾ ಕಾರು : ತಪ್ಪಿದ ಭಾರೀ ಅವಘಡ

ಮೈಸೂರು ಬಳಿ ಕಪಿಲಾ ನದಿಯ ಸೇತುವೆಗೆ ಇನೋವಾ ಕಾರು ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಮೈಸೂರು ಜಿಲ್ಲೆ ನಂಜನಗೂಡಿನ ಕಪಿಲಾ ನದಿಯ ಡಿ.ದೇವರಾಜ ಅರಸು ಸೇತುವೆಗೆ ಕಾರು ಡಿಕ್ಕಿಯಾಗಿ ನಿಂತಿದೆ. ಸೇತುವೆಗೆ ಡಿಕ್ಕಿ ಹೊಡೆದ ನಂತರ ಕಾರು ನಿಲ್ಲದೆ ಕೆಳಗೆ ಬಿದ್ದಿದ್ದರೆ ಭಾರಿ ಅವಘಡವೇ ಸಂಭವಿಸುತ್ತಿತ್ತು.

ಚಾಲಕನ ಅತಿವೇಗವೇ ಅಪಘಾತಕ್ಕೆ ಕಾರಣ ಆರೋಪ ಕೇಳಿ ಬಂದಿದೆ. ಕಾರಿನಲ್ಲಿದ್ದವರೆಲ್ಲಾ ಬೆಂಗಳೂರು ಮೂಲದವರಾಗಿದ್ದು, ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com