ಕಾಂಗ್ರೆಸ್‌ ಪಕ್ಷವನ್ನು ಮುಳುಗಿಸಲು ಅಪ್ಪ-ಮಕ್ಕಳ ಪಕ್ಷದಿಂದ ನಡೆದಿದೆ ದೊಡ್ಡ ಪ್ಲ್ಯಾನ್‌……..?

ಮೈಸೂರು : ಕಾಂಗ್ರೆಸ್‌ ಪಕ್ಷವನ್ನು ಮುಳುಗಿಸಲು ಅಪ್ಪ-ಮಕ್ಕಳು ಸಂಚು ರೂಪಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ.

ಈ ಮೂಲಕ ಕಾಂಗ್ರಸ್‌ ಪರ ಯಡಿಯೂರಪ್ಪ ಮತ್ತೆ ಮೃದು ಧೋರಣೆ ತಳೆದಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೊಂದಾಣಿಕೆ ರಾಜಕೀಯದ ಮೂಲಕ ಕುಮಾರಸ್ವಾಮಿ ಹಾಗೂ ದೇವೇಗೌಡರು ಕಾಂಗ್ರೆಸ್ ಮುಗಿಸಲು ಸಂಚು ರೂಪಿಸಿದ್ದಾರೆ. ಕಾಂಗ್ರೆಸ್ ಇದಕ್ಕೆ ಬಲಿಯಾಗಲಿದೆ. ಕುಮಾರಸ್ವಾಮಿ ಹೇಗೆ ಬಜೆಟ್ ಮಂಡನೆ ಮಾಡುತ್ತಾರೆ. ಹೇಗೆ ಸರ್ಕಾರ ನಡೆಸುತ್ತಾರೆ. ಕಾಂಗ್ರೆಸನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ಇನ್ನೂ ಎರಡು ಮೂರು ತಿಂಗಳು ಕಾದು ನೋಡೋಣ ಎಂದಿದ್ದಾರೆ.

ಜಯನಗರ ಹಾಗೂ ವಿಧಾನ ಪರಿಷತ್‌ನಲ್ಲಿ ಚುನಾವಣೆಯಲ್ಲಿ ಹೊಂದಾಣಿಕೆಯ ರಾಜಕೀಯ ಮಾಡುತ್ತಿದ್ದಾರೆ. ಅವರು ಏನಾದರೂ ಮಾಡಿಕೊಳ್ಳಲಿ ನಮ್ಮ ಪ್ರಯತ್ನವನ್ನು ನಾವು ಮಾಡುತ್ತೇವೆ. ಅಪ್ಪ-ಮಕ್ಕಳು ಏನೇ ಮಾಡಿದರೂ ನಮಗೇನೂ ತೊಂದರೆಯಾಗುವುದಿಲ್ಲ. ಕಿತ್ತಾಡುವುದನ್ನು ಬಿಟ್ಟು ಅಪ್ಪ ಮಕ್ಕಳ ಪಕ್ಷ ಹಾಗೂ ಕಾಂಗ್ರೆಸ್ ಜನರಿಗೆ ಅನುಕೂಲವಾಗುವ ರೀತಿ ಕೆಲಸ ಮಾಡಿ ತೋರಿಸಲಿ ಎಂದಿದ್ದಾರೆ.

 

Leave a Reply

Your email address will not be published.