FORBES-2018 : ವಿಶ್ವದ ಟಾಪ್-100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ ಹೆಸರು

ಫೋರ್ಬ್ಸ್ ಬಿಡುಗಡೆ ಮಾಡಿರುವ 2018ನೇ ಸಾಲಿನ ವಿಶ್ವದ ಟಾಪ್-100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರು ಕಾಣಿಸಕೊಂಡಿದೆ. ಜಾಹೀರಾತು ಕಂಪನಿಗಳ ಪಾಲಿಗೆ ಮೆಚ್ಚಿನ ಸೆಲೆಬ್ರಿಟಿಯಾಗಿರುವ ವಿರಾಟ್ ಕೊಹ್ಲಿ ಫೋರ್ಬ್ಸ್ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಕಾಣಿಸಿಕೊಂಡ ಭಾರತದ ಏಕೈಕ ಕ್ರೀಡಾಪಟು ಎನಿಸಿದ್ದಾರೆ.

ರನ್ ಮಷಿನ್ ವಿರಾಟ್ ಕೊಹ್ಲಿ ವಾರ್ಷಿಕ 24 ಮಿಲಿಯನ್ ಯು.ಎಸ್ ಡಾಲರ್ ಆದಾಯ ಹೊಂದಿದ್ದು, ಫೋರ್ಬ್ಸ್ ಪಟ್ಟಿಯಲ್ಲಿ 83 ಸ್ಥಾನದಲ್ಲಿದ್ದಾರೆ. ವಾರ್ಷಿಕ 285 ಮಿಲಿಯನ್ ಡಾಲರ್ ಆದಾಯ ಹೊಂದಿರುವ ವಿಶ್ವ ವಿಖ್ಯಾತ ಬಾಕ್ಸಿಂಗ್ ಪಟು ಫ್ಲಾಯ್ಡ್ ಮೇವೆದರ್ ರ್ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಟಾಪ್ – 100 ನಲ್ಲಿ NBA ಸ್ಟಾರ್ ಗಳಾದ 40 ಬಾಸ್ಕೆಟ್ ಬಾಲ್ ಆಟಗಾರರು ಇದ್ದಾರೆ. ಅಚ್ಚರಿಯೆಂದರೆ ಟಾಪ್-100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಪ್ರಪಂಚದ ಒಬ್ಬ ಮಹಿಳಾ ಕ್ರೀಡಾಪಟುವಿನ ಹೆಸರೂ ಕೂಡ ಇಲ್ಲ.

 

Leave a Reply

Your email address will not be published.