ಕಲಾಂ ಹಾದಿಯಲ್ಲಿ ಕೋವಿಂದ್ : ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿದ್ದ ಇಫ್ತಿಯಾರ್ ಕೂಟಕ್ಕೆ ಬ್ರೇಕ್‌

ದೆಹಲಿ : ರಂಜಾನ್ ಪ್ರಯುಕ್ತ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಲಾಗುತ್ತಿದ್ದ ಇಫ್ತಿಯಾರ್ ಕೂಟವನ್ನು ರದ್ದು ಪಡಿಸಲಾಗಿದೆ.
ಹಬ್ಬದ ಅಂಗವಾಗಿ ಇದೇ ಜೂನ್ 16ರಂದು ರೋಜಾ ನಡೆಯಲಿದೆ. ಸಾಮಾನ್ಯವಾಗಿ ರಾಷ್ಟ್ರಪತಿ ಭವನದಲ್ಲಿ ಈವರೆಗೂ ಹಬ್ಬದ ಹಿಂದಿನ ದಿನ ರಾಷ್ಟ್ರೀಯ ಪಕ್ಷಗಳ ನಾಯಕರು, ಮುಸ್ಲಿಂ-ಧಾರ್ಮಿಕ ಸಂಘಟನೆಗಳ ಮುಖಂಡರನ್ನು ಕರೆಸಿ ಇಫ್ತಿಯಾರ್ ಕೂಟವನ್ನು ಆಯೋಜಿಸಲಾಗುತ್ತಿತ್ತು.
ಆದರೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ಇಫ್ತಿಯಾರ್ ಕೂಟವನ್ನು ನಡೆಸದಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರಂತೆ. ಹೀಗಂತ ಮೂಲಗಳು ವರದಿ ಮಾಡಿವೆ. ಈ ಹಿಂದೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಕೂಡ ರಾಷ್ಟ್ರಪತಿ ಭವನದಲ್ಲಿ ಇಫ್ತಿಯಾರ್ ಕೂಟವನ್ನು ರದ್ದುಪಡಿಸಿ ಇದಕ್ಕೆ ತಗುಲುವ ವೆಚ್ಚದ ಹಣವನ್ನು ಅನಾಥಾಶ್ರಮಗಳಿಗೆ ನೀಡಿದ್ದರು.
ಅಬ್ದುಲ್ ಕಲಾಂ ಮಾದರಿಯನ್ನೇ ಕೋವಿಂದ್ ಅನುಸರಿಸಿದ್ದು, ಅದರ ಹಣವನ್ನು ಅನಾಥಾಶ್ರಮಗಳಿಗೆ ನೀಡಲು ತೀರ್ಮಾನಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com