ಇಶ್ರತ್‌ ಜಹಾನ್‌ ನಕಲಿ ಎನ್‌ಕೌಂಟರ್‌ ಪ್ರಕರಣ : ಡಿಐಜಿ ಬಿಚ್ಚಿಟ್ರು ಮೋದಿ “ಶಾ”ಕಿಂಗ್‌ ರಹಸ್ಯ !

ದೆಹಲಿ :  ಇಶ್ರತ್ ಜಹಾನ್ ಎನ್​ಕೌಂಟರ್ ಪ್ರಕರಣ ಸಂಬಂಧ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ. ಗುಜರಾತ್​ನಲ್ಲಿ ನಡೆದ ನಕಲಿ ಎನ್​ಕೌಂಟರ್ ಪ್ರಕರಣ ಕುರಿತು ಮಾಜಿ ಡಿಐಜಿ ಡಿಜಿ ವಂಜಾರಾ ಶಾಕಿಂಗ್ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ.

ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹಾಗೂ ಗೃಹಮಂತ್ರಿಯಾಗಿದ್ದ ಅಮಿತ್ ಶಾರನ್ನು ಆಗಲೇ ಸಿಬಿಐ ಅಧಿಕಾರಿಗಳು ಬಂಧಿಸಬೇಕಿತ್ತು. ಆದರೆ ಅದೃಷ್ಟವಶಾತ್ ಬಚಾವ್ ಆಗಿದ್ದಾರೆ ಎಂದು ವಂಜಾರಾ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ವಿ.ಡಿ. ಗಜ್ಜರ್ ಅಹ್ಮದಾಬಾದ್ ವಿಶೇಷ ನ್ಯಾಯಲಯದ ಮುಂದೆ ಹೇಳಿಕೆ ನೀಡಿದ್ದಾರೆ.

2014ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ  ಕೊರತೆ ಹಿನ್ನೆಲೆಯಲ್ಲಿ ಶಾ ಹಾಗೂ ಮೋದಿಗೆ ಕ್ಲೀನ್ ಚಿಟ್ ನೀಡಲಾಗಿತ್ತು. ಆದರೆ ಇಂದು ಡಿಐಜಿ ಈ ಹೇಳಿಕೆಯಿಂದ ಇಶ್ರತ್ ಜಹಾನ್ ಕೇಸ್ ಮರುಹುಟ್ಟು ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಏನಿದು ಇಶ್ರತ್ ಜಹಾನ್ ಪ್ರಕರಣ ?

2004ರಲ್ಲಿ ಇಶ್ರತ್ ಜಹಾನ್ ಸೇರಿದಂತೆ ಮೂವರನ್ನು ಫೇಕ್ ಎನ್​ಕೌಂಟರ್ ಹೆಸರಿನಡಿಯಲ್ಲಿ ಹತ್ಯೆ ಮಾಡಲಾಗಿತ್ತು. ಈ ವರದಿಯನ್ನು ಎಸ್.ಪಿ. ತಮಾಂಗ್ ಅವರ ನೇತೃತ್ವದಲ್ಲಿ ಗುಜರಾತ್ ಸರ್ಕಾರಕ್ಕೆ ನೀಡಿತ್ತು. ಆದರೆ ಅಂದಿನ ಗುಜರಾತ್ ಸರ್ಕಾರ ಇದನ್ನು ತಿರಸ್ಕರಿಸಿತ್ತು. ಇದೀಗ ಮಾಜಿ ಡಿಐಜಿ ವಂಜಾರಾ ಅವರ ಹೇಳಿಕೆಯಿಂದ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com