ನೀ ಕೇಳಿದ್ದೆಲ್ಲ ಕೊಡಿಸ್ತೀನಿ ಸ್ವಲ್ಪ ಅಡ್ಜೆಸ್ಟ್‌ ಮಾಡ್ಕೋ ಅಂತ ಈ ನಟನನ್ನೂ ಕೇಳಿದ್ರಂತೆ….!

ಸಿನಿಮಾಗಳಲ್ಲಿ ಕಾಸ್ಟಿಂಗ್‌ ಕೌಚ್‌ ದಿನೇ ದಿನೇ ಹೆಚ್ಚುತ್ತಲೇ ಇದೆ. ಕೇವಲ ನಟಿಯರಿಗೆ ಮಾತ್ರವಲ್ಲ , ನಟರಿಗೂ ಈ ಅನುಭವವಾಗಿದೆಯಂತೆ.

ಹೌದು ಇಂತದ್ದೇ ಅನುಭವ ನಟ, ನಿರೂಪಕ ನಿರಂಜನ್‌ ದೇಶಪಾಂಡೆಯವರಿಗೂ ಆಗಿತ್ತಂತೆ. ಹೀಗಂತ ಅವರೇ ಹೇಳಿದ್ದಾರೆ. ಈ ಹಿಂದೆ ನಿರಂಜನ್‌ ಅವಕಾಶಕ್ಕಾಗಿ ಮುಂಬೈಗೆ ಹೋಗಿದ್ದರಂತೆ. ಆಗ ಅವರಿಗೂ ಕಾಸ್ಟಿಂಗ್‌ ಕೌಚ್‌ನ ಅನುಭವವಾಗಿತ್ತಂತೆ. ಅರಂಭದ ದಿನಗಳಲ್ಲಿ ಒಂದು ಕ್ರೇಜ್ ಇತ್ತು. ಹೈದ್ರಾಬಾದ್, ಮುಂಬೈಗೆ ಹೋದ್ರೆ ಅವಕಾಶ ಹೆಚ್ಚು ಸಿಗುತ್ತೆ ಅಂತ. ಅಲ್ಲಿಗೆ ಒಮ್ಮೆ ಹೋಗಿದ್ದಾಗ ನನ್ನ ಬಳಿಯೂ ಒಬ್ಬರು ಈ ರೀತಿ ಕೇಳಿದ್ರು ಎಂದು ನಿರಂಜನ್ ಹೇಳಿದ್ದಾರೆ.

ಜಾಹೀರಾತೊಂದರಲ್ಲಿ ನಿರಂಜನ್ ನಟಿಸುತ್ತಿದ್ದಾಗ, ಅಲ್ಲೊಬ್ಬ ವ್ಯಕ್ತಿ, ನಿನಗೇನು ಬೇಕು ಹೇಳು ಎಲ್ಲವನ್ನೂ ನಾನು ಕೊಡಿಸುತ್ತೇನೆ, ಆದರೆ ನೀನು ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದಿದ್ದರಂತೆ.   ನನ್ನ ನಟನೆಗೆ ಮೆಚ್ಚಿ ಈ ರೀತಿ ಹೇಳುತ್ತಿರಬಹುದು ಎಂದುಕೊಂಡು ನಿರಂಜನ್‌ ಸರಿ ಎಂದಿದ್ದರಂತೆ. ಬಳಿಕ ಫೋನ್‌ನಲ್ಲಿ ಮೆಸೇಜ್‌ ಮಾಡಿ, ಕರೆ ಮಾಡಿ ಅಲ್ಲಿಗೆ ಬಾ ಇಲ್ಲಿಗೆ ಬಾ ಎಂದು ಕರೆಯುತ್ತಿದ್ದರು ಎಂದು ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

ಬಳಿಕ ಅಲ್ಲಿಂದ ಯಾರಿಗೂ ಹೇಳದೆ ಓಡಿಬಂದಿದ್ದೆ, ಹೆಣ್ಣು ಮಕ್ಕಳಿಗೆ ಮಾತ್ರವಲ್ಲ ಗಂಡಸರಿಗೂ ಈ ರೀತಿಯಾಗುತ್ತವೆ ಎಂದು ನಿರಂಜನ್ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com