ರಾಜ್ಯಸಂಪುಟಕ್ಕೆ ನೂತನ ಸಚಿವರ ಸೇರ್ಪಡೆ : ಡಿಕೆಶಿ, ರೇವಣ್ಣ ಸೇರಿದಂತೆ 25 ಮಂದಿ ಪ್ರಮಾಣವಚನ ಸ್ವೀಕಾರ

ಬೆಂಗಳೂರು : ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಸದಸ್ಯರ ಪದಗ್ರಹಣ ಕಾರ್ಯಕ್ರಮ ನಡೆದಿದೆ. ರಾಜ್ಯಪಾಲರಾದ ವಜೂಭಾಯಿ ವಾಲಾ ಅವರು 25 ಮಂದಿ ಸಂಪುಟ ದರ್ಜೆ ಸಚಿವರಿಗೆ ಪ್ರಮಾಣವಚನ ಬೋಧಿಸಿದ್ದಾರೆ.

ಸಮಾರಂಭದ ವೇದಿಕೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಉಪಸ್ಥಿತರಿದ್ದು, ಎಲ್ಲಾ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. ಹೊಸ ಸರ್ಕಾರದಲ್ಲಿ ಒಕ್ಕಲಿಗ ಸಮುದಾಯದಿಂದ 9 ಮಂದಿ, ಲಿಂಗಾರಿತರಿಗೆ 4, ಉಪ್ಪಾರ, ಈಡಿಗ ಸಮುದಾಯಕ್ಕೆ ತಲಾ ಒಂದು, ಮೂವರು ಅಲ್ಪಸಂಖ್ಯಾತರು, ಬ್ರಾಹ್ಮಣ ಸಮುದಾಯದಿಂದ ಒಬ್ಬರು, ಇಬ್ಬರು ಕುರುಬ ಸಮುದಾಯ ಹಾಗೂ ಒಬ್ಬ ಮಹಿಳೆಗೆ ಸಚಿವ ಸ್ಥಾನ ನೀಡಲಾಗಿದೆ.

ನೂತನ ಸಂಪುಟ ದರ್ಜೆ ಸಚಿವರ ಪಟ್ಟಿ ಇಲ್ಲಿದೆ 

1.ಎಚ್‌.ಡಿ.ರೇವಣ್ಣ  (ಜೆಡಿಎಸ್‌ )
2.ಆರ್‌.ವಿ.ದೇಶ್‌ಪಾಂಡೆ (ಕಾಂಗ್ರೆಸ್‌ )
3.ಬಂಡೆಪ್ಪ ಕಾಶಂಪೂರ್‌ (ಜೆಡಿಎಸ್‌ )
4.ಡಿ.ಕೆ.ಶಿವಕುಮಾರ್‌ (ಕಾಂಗ್ರೆಸ್‌ )
5.ಜಿ.ಟಿ.ದೇವೇಗೌಡ (ಜೆಡಿಎಸ್‌)
6. ಕೆ.ಜೆ.ಜಾರ್ಜ್‌ (ಕಾಂಗ್ರೆಸ್‌)
7.ಡಿ.ಸಿ.ತಮ್ಮಣ್ಣ (ಜೆಡಿಎಸ್‌ )
8.ಕೃಷ್ಣ ಭೈರೇಗೌಡ (ಕಾಂಗ್ರೆಸ್‌)
9.ಎಂ.ಸಿ.ಮನಗೂಳಿ (ಜೆಡಿಎಸ್‌)
10 ಎನ್‌.ಎಚ್‌.ಶಿವಶಂಕರ್‌ರೆಡ್ಡಿ (ಕಾಂಗ್ರೆಸ್‌)
11.ಎಸ್‌.ಆರ್‌.ಶ್ರೀನಿವಾಸ್‌(ಜೆಡಿಎಸ್‌)
12.ರಮೇಶ್‌  ಲಕ್ಷ್ಮಣ್‌ ರಾವ್‌ ಜಾರಕೀಹೊಳಿ(ಕಾಂಗ್ರೆಸ್‌)
13. ವೆಂಕಟರಾವ್‌ ನಾಡಗೌಡ (ಜೆಡಿಎಸ್‌)
14.ಪ್ರಿಯಾಂಕ ಖರ್ಗೆ (ಕಾಂಗ್ರೆಸ್‌)
15.ಸಿ.ಎಸ್‌.ಪುಟ್ಟರಾಜು(ಜೆಡಿಎಸ್‌)
16.ಯು.ಟಿ.ಅಬ್ದುಲ್‌ ಖಾದರ್‌ (ಕಾಂಗ್ರೆಸ್‌)
17.ಸಾಲಿಗ್ರಾಮ ರಾಮೇಗೌಡ ಮಹೇಶ್‌ (ಜೆಡಿಎಸ್‌)
18. ಬಿ.ಝಡ್‌.ಜಮೀರ್‌ ಅಹ್ಮದ್‌ ಖಾನ್‌ (ಕಾಂಗ್ರೆಸ್‌)
19.ಎನ್‌.ಮಹೇಶ್‌ (ಬಿಎಸ್‌ಪಿ)
20.ಶಿವಾನಂದ ಪಾಟೀಲ್‌ (ಕಾಂಗ್ರೆಸ್‌)
21. ವೆಂಕಟರಮಣಪ್ಪ (ಕಾಂಗ್ರೆಸ್‌)
22. ರಾಜಶೇಖರ್‌ ಬಸವರಾಜ್‌ ಪಾಟೀಲ್‌ (ಕಾಂಗ್ರೆಸ್‌)
23. ಪುಟ್ಟರಂಗ ಶೆಟ್ಟಿ (ಕಾಂಗ್ರೆಸ್‌ )
24.ಆರ್‌.ಶಂಕರ್‌ (ಪಕ್ಷೇತರ)
25. ಡಾ.ಜಯಮಾಲ ರಾಮಚಂದ್ರ (ಕಾಂಗ್ರೆಸ್‌)

Leave a Reply

Your email address will not be published.

Social Media Auto Publish Powered By : XYZScripts.com