ನಲಪಾಡ್‌ಗೆ ಇಂದೂ ಸಿಗಲಿಲ್ಲ ಜಾಮೀನು : ಜೂ.11ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು : ಶಾಂತಿ ನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್‌ ಪುತ್ರ ಮೊಹಮ್ಮದ್‌  ನಲಪಾಡ್‌ಗೆ ಇನ್ನೂ ಜಾಮೀನು ಸಿಗುವ ಸಮಯ ಬಂದಿಲ್ಲ.

ಇಂದೂ ಸಹ ಹೈಕೋರ್ಟ್ ನಲಪಾಡ್‌ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ಇಂದು ಪ್ರಕರಣದ ವಾದ ವಿವಾದವನ್ನು ಆಲಿಸಿದ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಜೂನ್‌ 11ಕ್ಕೆ ಮುಂದೂಡಿದೆ.

ನಲಪಾಡ್ ್ಪರ ಹಿರಿಯ ವಕೀಲರಾದ ಬಿ.ವಿ ಆಚಾರ್ಯ ವಾದ ಮಾಡಿದ್ದು, ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಆದರೆ ವಿದ್ವತ್‌ ಪರ ವಾದ ಮಂಡಿಸುತ್ತಿರುವ ಶ್ಯಾಂ ಸುಂದರ್‌ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರಂತೆ ನ್ಯಾಯಾಲಯ ಜೂನ್‌ 11ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಅದೇ ದಿನದಂದು ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿ ಶ್ಯಾಂ ಸುಂದರ್ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಉದ್ಯಮಿ ಪುತ್ರ ವಿದ್ವತ್‌ ಮೇಲೆ ಘರ್ಜಿ ಕೆಫೆಯಲ್ಲಿ ನಲಪಾಡ್‌ ಹಲ್ಲೆ ನಡೆಸಿದ್ದ ಹಿನ್ನೆಲೆಯಲ್ಲಿ ಆತನಿಗೆ ಶಿಕ್ಷೆ ವಿಧಿಸಲಾಗಿತ್ತು. ಅಲ್ಲ ದೆ ಸೆಷನ್ಸ್ ಕೋರ್ಟ್ ಈತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

4 thoughts on “ನಲಪಾಡ್‌ಗೆ ಇಂದೂ ಸಿಗಲಿಲ್ಲ ಜಾಮೀನು : ಜೂ.11ಕ್ಕೆ ವಿಚಾರಣೆ ಮುಂದೂಡಿಕೆ

Leave a Reply

Your email address will not be published.

Social Media Auto Publish Powered By : XYZScripts.com