ನನಗೆ ಅಧಿಕಾರಕ್ಕಿಂತ ಆತ್ಮಾಭಿಮಾನವೇ ಹೆಚ್ಚು, ಎಂದಿಗೂ ಸ್ಥಾನಮಾನ ಕೊಡಿ ಎಂದು ಕೇಳಲ್ಲ : M.B ಪಾಟೀಲ್‌

ಬೆಂಗಳೂರು : ನನ್ನನ್ನು ಯಾವ ಕಾರಣಕ್ಕೆ ಮಂತ್ರಿ ಮಾಡಿಲ್ಲ ಎಂದು ಗೊತ್ತಿಲ್ಲ. ಸಂಜೆ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ನನಗೆ ಯಾವ ಪಕ್ಷದಿಂದಲೂ ಆಫರ್ ಬಂದಿಲ್ಲ. ಅಂತಹ ಪ್ರಸಂಗ ಬಂದಿಲ್ಲ ಎದುರಾಗಿಲ್ಲ. ನನಗೆ ಅಧಿಕಾರಕ್ಕಿಂತ ಸ್ವಾಭಿಮಾನ, ಆತ್ಮ ಗೌರವವೇ ಹೆಚ್ಚು. ನನ್ನ ತಂದೆಯೂ ಹಾಗೆ ಇದ್ದರು. ನಾನು ಹಾಗೆಯೇ ಇರುತ್ತೇನೆ. ಪಕ್ಷದ ಮಟ್ಟದಲ್ಲಿ ಏನು ಚರ್ಚೆ ಆಯ್ತು ಅಂತ ಸಿದ್ದರಾಮಯ್ಯರನ್ನು ಕೇಳುತ್ತೇನೆ. ಆದರೆ ಸ್ಥಾನಮಾನ ಕೊಡಿ ಎಂದು ಕೇಳುವುದಿಲ್ಲ ಎಂದಿದ್ದಾರೆ.

ನನಗೆ ಯಾವುದೇ ಪದವಿ ಕೊಟ್ಟರೂ ಬೇಡ. ಈ ಹಿಂದೆ 5 ವರ್ಷ ಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ಇನ್ಮುಂದೆ ಶಾಸಕನಾಗಿ ಕೆಲಸ ಮಾಡುತ್ತೇನೆ. ನಾನು ಹಿರಿಯನೂ ಅಲ್ಲ, ಕಿರಿಯನೂ ಅಲ್ಲ. ಕೆಲವೊಮ್ಮೆ ಹೀಗೆಲ್ಲ ಆಗುತ್ತದೆ.‌‌ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com