ಶಸ್ತ್ರ ಸಜ್ಜಿತವಾಗಿ ಅವಕಾಶಕ್ಕಾಗಿ ಕಾದು ಕುಳಿತ ಬಿಜೆಪಿ : ಸಚಿವ ಸ್ಥಾನ ಕೈ ತಪ್ಪಿದವರಿಗೆ ಕಮಲ ಪಾಳಯದಿಂದ ಗಾಳ ?

ಬೆಂಗಳೂರು : ಕಾಂಗ್ರೆಸ್​ ಹಾಗೂ ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಭಿನ್ನಮತ ಭುಗಿಲೆದ್ದಿದೆ. ಅಂದು ಪಕ್ಷದ ಸಿದ್ಧಾಂತಕ್ಕೆ ಬದ್ಧ ಎಂದು ಹೇಳುತ್ತಿದ್ದ ಶಾಸಕರು ಇಂದು ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಇದರ ಸಂಪೂರ್ಣ ಲಾಭ ಪಡೆಯಲು ಬಿಜೆಪಿ ತೆರೆಯ ಹಿಂದೆ ಕಸರತ್ತು ನಡೆಸಿದೆ.
ಮೇ 15 ರಂದು ರಾಜ್ಯ ಚುನಾವಣಾ ಫಲಿತಾಂಶ ಬಂದ ಮೇಲೆ ಅತಿ ದೊಡ್ಡ ಪಕ್ಷ ಬಿಜೆಪಿ ಅಧಿಕಾರ ಹಿಡಿಯಲು ಎಲ್ಲಿಲ್ಲದ ಕಸರತ್ತು ನಡೆಸಿದ್ದು, ಎಲ್ಲರಿಗೂ ಗೊತ್ತೆ ಇದೆ. ಆದರೆ, ಆಮಿಷಕ್ಕೆ ಒಳಗಾಗದಂತೆ ಕಾಂಗ್ರೆಸ್​ ತಮ್ಮ ಶಾಸಕರನ್ನು ತಡೆಯಲು ಪ್ಲಾನ್​ ಮಾಡಿ ರೆಸಾರ್ಟ್​​ಗೆ ಕರೆದುಕೊಂಡು ಹೋಗಿತ್ತು. ಆಗ ಕೈ ಪಾಳಯ ಅಖಾಡದಲ್ಲಿ ರಚಿಸಿದ ಚಕ್ರವ್ಯೂಹವನ್ನು ಬೇಧಿಸುವಲ್ಲಿ, ಕಮಲ ಪಾಳಯ ವಿಫಲವಾಗಿತ್ತು. ಅಲ್ಲದೆ ತೀವ್ರ ಮುಖಭಂಗ ಅನುಭವಿಸಿತ್ತು.


ಇದರಿಂದ ಬೇಸತ್ತು ಆಗಿನ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ತೆರವಾದ ಸ್ಥಾನಕ್ಕೆ ಕುಮಾರಸ್ವಾಮಿ ಬಂದು ಕುಳಿತರು. ಇನ್ನೇನು ಮೈತ್ರಿ ಸರ್ಕಾರ ಭದ್ರ. ನಮ್ಮಲ್ಲಿ ಭಿನ್ನಮತ ಇಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾ ಇದ್ದ ಉಭಯ ಪಕ್ಷಗಳು, ಸಚಿವ ಸಂಪುಟ ವಿಸ್ತರಣೆ ವಿಷಯದಲ್ಲಿ ಮಾತ್ರ ಮಿನಾ ಮೇಷ ಎಣಿಸುತ್ತಿದ್ದವು. ಅ

ನುಭವಿಗಳಿಗೆ ಈ ಬಾರಿ ಮಣೆ ಹಾಕುವುದಿಲ್ಲ ಎಂದು ಒಂದು ಪಕ್ಷ ಹೇಳಿದ್ರೆ, ಇನ್ನೊಂದು ಪಕ್ಷ ಮೇಲ್ಮನೆಯ ಸದಸ್ಯರಿಗೆ ಮಂತ್ರಿ ಗಿರಿ ನಿಡೋದಿಲ್ಲ ಎಂದು ತಿಳಿಸಿತ್ತು.


ಇದನ್ನು ತೆರೆಯ ಹಿಂದೆ ನಿಂತು ವೀಕ್ಷಿಸುತ್ತಿರುವ ಬಿಜೆಪಿ ಹೊಸ ಸೂತ್ರವನ್ನು ಹೆಣೆದುಕೊಂಡಿದೆ. ಅದ್ರಂತೆ ಸಚಿವ ಸ್ಥಾನ ಕೈ ತಪ್ಪಿದಕ್ಕೆ ಆಕ್ರೋಶ ವ್ಯಕ್ತ ಪಡಿಸುತ್ತಿರುವ ಸಚಿವರನ್ನು ಕಮಲ ನಾಯಕರು ಸಂಪರ್ಕಿಸುವ ಸಾಧ್ಯತೆ ಇದ್ದು, ಸಚಿವ ಸಂಪುಟ ವಿಸ್ತರಣೆ ಬಳಿಕ ಬಿಜೆಪಿ ಶಸ್ತ್ರ ಸನ್ನದ್ಧವಾಗಿ ಅಖಾಡ ಪ್ರವೇಶಿಸಲಿದೆ.

Leave a Reply

Your email address will not be published.

Social Media Auto Publish Powered By : XYZScripts.com