ಜಮ್ಮ-ಕಾಶ್ಮೀರ : ಗಡಿಯಲ್ಲಿ ಒಳ ನುಸುಳಲು ಯತ್ನ : 3 ಉಗ್ರರ ಹತ್ಯೆಗೈದ ಸೇನೆ

ಜಮ್ಮ ಕಾಶ್ಮೀರದ ಭಾರತ-ಪಾಕ್ ಗಡಿಯಲ್ಲಿ ಒಳ ನುಸುಳಲು ಯತ್ನಿಸಿದ ಉಗ್ರರ ಯೋಜನೆಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಚಿಲ್ ಸೆಕ್ಟರ್ ನ ಲೈನ್ ಆಫ್ ಕಂಟ್ರೋಲ್ ಬಳಿ ಬುಧವಾರ ಬೆಳಗಿನ ಜಾವ ಸಂಶಯಾಸ್ಪದ ಚಲನೆ ಕಂಡು ಬಂದಿದೆ.

ನಂತರ ಭಾರತೀಯ ಸೇನಾ ಪಡೆಯ ಯೋಧರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಈ ವೇಳೆ ಸೇನೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ. ಘಟನಾ ಸ್ಥಳದಲ್ಲಿ ಶೋಧ ಕಾರ್ಯ ಜಾರಿಯಲ್ಲಿದೆ ಎಂದು ಸೇನೆಯ ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com