ತುಮಕೂರು : ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಲಾರಿ : ಮೂವರ ದುರ್ಮರಣ

ತುಮಕೂರು : ನಿಂತಿದ್ದ ಲಾರಿಗೆ‌ ಹಿಂಬದಿಯಿಂದ ಇನ್ನೊಂದು ಲಾರಿ‌ ಡಿಕ್ಕಿಯಾಗಿರುವ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಶಿರಾ ರಾಷ್ಟ್ರೀಯ ಹೆದ್ದಾರಿಯ ಚಿಕ್ಕ‌ನಹಳ್ಳಿ ಬಳಿ ಅಪಘಾತ ಸಂಭವಿಸಿದೆ. ನಿಂತಿದ್ದ ಲಾರಿಗೆ ವೇಗವಾಗಿ ಬಂದ ಲಾರಿ ಹಿಂದಿನಿಂದ ಡಿಕ್ಕಿಯಾಗಿ ದುರ್ಘಟನೆ‌ ಸಂಭವಿಸಿದೆ.

ಹಿಂಬದಿ ಲಾರಿಯಲ್ಲಿದ್ದ ಮೂವರು ಸಾವಿಗೀಡಾಗಿದ್ದು, ಮೃತರೆಲ್ಲರೂ ಶಿರಾ ತಾಲ್ಲೂಕಿನ ವಡ್ಡರಹಳ್ಳಿ ಮೂಲದವರಾಗಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com