ಕನ್ನಡದ ಬಟರ್​ ಫ್ಲೈಗೆ ಬರ್ತ್‌ಡೇ ಸಂಭ್ರಮ : ಸೆಟ್ಟಲ್ಲೇ ಪ್ಯಾರ್‌ ಹುಡುಗಿ ಪಾರೂಲ್‌ ಹುಟ್ಟುಹಬ್ಬ ಆಚರಿಸಿದ ಚಿತ್ರತಂಡ

ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಿ ರಾಷ್ಟ್ರಪ್ರಶಸ್ತಿ ಬಾಚಿಕೊಂಡಿದ್ದ ಕ್ವೀನ್​ ಚಿತ್ರ ಕನ್ನಡ ಸೇರಿ ಹಲವು ಭಾಷೆಗಳಲ್ಲಿ ತೆರೆಕಾಣಲು ಸಿದ್ಧವಾಗುತ್ತಿದೆ. ನಟ, ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶನದ ಈ ಚಿತ್ರ ಸದ್ಯ ಮೈಸೂರಲ್ಲಿ ಚಿತ್ರೀಕರಣವಾಗುತ್ತಿದೆ. ಇಂದು ಚಿತ್ರದ ನಾಯಕಿ ಪಾರೂಲ್ ಯಾದವ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರೀಕರಣ ಸೆಟ್​ನಲ್ಲಿಯೇ ಪಾರೂಲ್ ಬರ್ತ್‌ಡೇ ಆಚರಿಸಲಾಗಿದೆ.

ಚಿತ್ರೀಕರಣದಲ್ಲಿ ಆದ ತಮ್ಮ ಅನುಭವವನ್ನು ಹಂಚಿಕೊಳ್ಳಲು ಇಂದು ಬಟರ್ ಫ್ಲೈ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತ್ತು. ಈ ವೇಳೆ ಮಾತನಾಡಿದ ನಿರ್ದೇಶಕ ರಮೇಶ್‌, ಎಲ್ಲ ಸಿನಿಮಾಗಳನ್ನು ರಿಮೇಕ್ ಮಾಡೋಕ್ಕೆ ಆಗಲ್ಲ. ಅ ಚಿತ್ರದಲ್ಲಿ ಏನೋ ಒಂದು ಅಂಶ ನಿಮಗೆ ಸ್ಪಂದಿಸಬೇಕು. ಇಲ್ಲಿ ನನಗೆ ಸ್ಪಂದಿಸಿದ್ದು ಕಥೆ. ಈಗ ನಡೆಯುತ್ತಿರುವ ಕಥೆ ಅದು. ಇಂದಿನ ಕಾಲದ ಎಷ್ಟೋ ಹುಡುಗ ಹುಡುಗಿ ಪ್ರೀತಿ ಮಾಡಿ ಸಡನ್ ಆಗಿ ಕೈ ಕೊಟ್ಟು ಬಿಡುತ್ತಾರೆ. ಆಗ ನಾವು ಮಾಡಿದ್ದ ನಮ್ಮೂರ ಮಂದಾರ ಹೂವೆ ಸಿನಿಮಾದ ರೀತಿ ಪ್ರೀತಿಸಿದವರಿಗೆ ಜೀವನವನ್ನೇ ತ್ಯಾಗ ಮಾಡುವ ಕಾನ್ಸೆಪ್ಟ್ ಈಗ ಇಲ್ವಾ ಅಂತ ಅನಿಸುತ್ತದೆ. ಅಂದು ಒಂದು ಹುಡುಗಿಗಾಗಿ 20 ವರ್ಷ ಕಾಯುವ ಸಿನಿಮಾ ಮಾಡಿದ್ವಿ. ಆದರೆ ಈಗ ಅದೆಲ್ಲ ಇಲ್ವಾ ಎಂಬ ಭಾವ ಬರುತ್ತದೆ. ಒಂದು ಸಿನಿಮಾ ಸಮಾಜದ ಪ್ರತಿಬಿಂಬ ಆಗಿರುತ್ತದೆ. ಅದೇ ರೀತಿ ಇಂದಿನ ಸಮಾಜದ ಪ್ರತಿ ಬಿಂಬನೇ ಬಟರ್ ಫ್ಲೈ ಎಂದಿದ್ದಾರೆ.

ಬಟರ್ ಫ್ಲೈ’ ಚಿತ್ರ ಸಖತ್ ಕಲರ್ ಫುಲ್ ಆಗಿ ಮೂಡಿ ಬಂದಿದೆ. ಮೂರು ಭಾಷೆಯಲ್ಲಿ ಒಂದೇ ಚಿತ್ರವನ್ನು ಮಾಡುವಾಗ ನನಗೆ ಅದು ಅಷ್ಟು ಕಷ್ಟ ಅಂತ ಏನು ಅನಿಸಿಲ್ಲ. ಇದೇ ರೀತಿ ಈ ಹಿಂದೆ ನಾಲ್ಕು ಭಾಷೆಯ ಚಿತ್ರದಲ್ಲಿ ಒಮ್ಮೆಲೇ ನಟನೆ ಮಾಡಿದ್ದೇನೆ. ಅದರ ಅನುಭವ ಇದೆ. ಈ ರೀತಿ ಇದ್ದಾಗ ಅದನ್ನು ಕೂಲ್ ಆಗಿ ಮಾಡಬೇಕು. ಆ ನಟಿ ಮಾಡಿದ ಶೈಲಿ.. ಈ ನಟಿ ಮಾಡಿದ ಶೈಲಿ ಒಂದೇ ಆಗಬಾರದು. ಮುಖ್ಯವಾಗಿ ಆ ಭಾಷೆಗಳು ನನಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ತೊಂದರೆ ಆಗಲಿಲ್ಲ ಎಂದಿದ್ದಾರೆ.

ಇನ್ನು ಚಿತ್ರದಲ್ಲಿ ಸತ್ಯ ಹೆಗಡೆ ಕ್ಯಾಮರಾ ಕೆಲಸ ಅದ್ಭುತವಾಗಿ ಮೂಡಿಬಂದಿದೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಕನ್ನಡ ಮತ್ತು ತಮಿಳಿನಲ್ಲಿ ಚಿತ್ರವನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದು ತಮಿಳಿನಲ್ಲಿ ಕಾಜಲ್ ಅಗರ್ವಾಲ್ ಕಾಣಿಸಿಕೊಂಡಿದ್ದಾರೆ

Leave a Reply

Your email address will not be published.

Social Media Auto Publish Powered By : XYZScripts.com