NEET-2018 ಫಲಿತಾಂಶ : ಬಿಹಾರದ ಕಲ್ಪನಾ ಕುಮಾರಿ ದೇಶಕ್ಕೆ ಪ್ರಥಮ

2018ನೇ ಸಾಲಿನ ನೀಟ್ (NEET – National Eligibility and Entrance Test) ಪರೀಕ್ಷೆಯ ಫಲಿತಾಂಶವನ್ನು ಸಿಬಿಎಸ್ಇ ಬೋರ್ಡ್ ಸೋಮವಾರ ಪ್ರಕಟಿಸಿದೆ. ಬಿಹಾರದ ವಿದ್ಯಾರ್ಥಿನಿ ಕಲ್ಪನಾ ಕುಮಾರಿ ದೇಶಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಮೇ 6 ರಂದು ನಡೆಇದ್ದ ನೀಟ್ ಪರೀಕ್ಷಯಲ್ಲಿ ಕಲ್ಪನಾ ಕುಮಾರಿ ಒಟ್ಟು 720 ಅಂಕಗಳಿಗೆ 691 ಅಂಕಗಳನ್ನು ಗಳಿಸಿದ್ದಾರೆ.

Image result for kalpana kumari

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಟಾಪರ್ ಕಲ್ಪನಾ ಕುಮಾರಿ ‘ ಡಾಕ್ಟರ್ ಆಗಬೇಕೆಂಬುದು ನನ್ನ ಜೀವನದ ದೊಡ್ಡ ಕನಸಾಗಿದೆ. MBBS ಅಧ್ಯಯನಕ್ಕಾಗಿ ಸದ್ಯ ಒಂದು ಒಳ್ಳೆಯ ಕಾಲೇಜಿನಲ್ಲಿ ಪ್ರವೇಶಾತಿಗಾಗಿ ಇದಿರು ನೋಡುತ್ತಿದ್ದೇನೆ ‘ ಎಂದು ಹೇಳಿದ್ದಾರೆ.

ದೇಶಕ್ಕೆ 2ನೇ ರ್ಯಾಂಕ್ ಪಡೆದಿರುವ ತೆಲಂಗಾಣಾದ ರೋಹನ್ ಪುರೋಹಿತ್ 690 ಅಂಕ ಗಳಿಸಿದ್ದಾರೆ. ಮೂರನೇ ರ್ಯಾಂಕ್ ಪಡೆದಿರುವ ದೆಹಲಿ ಮೂಲದ ಹಿಮಾಂಶು ಶರ್ಮಾ ಕೂಡ 690 ಅಂಕಗಳನ್ನು ಗಳಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com