WATCH : ಜಲಲ ಜಲಲ ಜಲ ಧಾರೆ…. ಚಾಮುಂಡಿ ಬೆಟ್ಟದ ಮೆಟ್ಟಿಲ ಮೇಲೂ ಹರಿದ ಜಲಪಾತ

ಮೈಸೂರು : ಕಲೆಗಳ ತವರೂರು ಎಂದೇ ಖ್ಯಾತಿ ಪಡೆದಿರುವ ಮೈಸೂರಿನಲ್ಲಿ ಭಾರೀ ಮಳೆ ಸುರಿದಿದೆ. ಚಾಮುಂಡಿ ಬೆಟ್ಟದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮೆಟ್ಟಿಲುಗಳ ಮೇಲೆ ನೀರು ಹರಿದಿದ್ದು, ಮಿನಿ ಜಲಪಾತ ಸೃಷ್ಠಿಯಾದಂತಹ ದೃಶ್ಯ ಕಂಡು ಬಂದಿದೆ. ಪ್ರವಾಸಿಗರೊಬ್ಬರು ಇದರ ವಿಡಿಯೋ ಮಾಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.

ಒಂದು ವೇಳೆ ಯಾವುದಾದರೂ ಜಲಪಾತಕ್ಕೆ ಹೋಗಬೇಕು ಎಂದುಕೊಂಡಿರುವವರು ಚಾಮುಂಡಿ ಬೆಟ್ಟಕ್ಕೆ ಹೋದರೆ ಸಾಕು ಎಂದೆನಿಸುವುದಂತೂ ಸುಳ್ಳಲ್ಲ…

Leave a Reply

Your email address will not be published.