ಏನೂ ತಿಳಿಯದೆ ಸೆಕ್ಸ್‌ ರೂಂಗೆ ಹೋದ ಆರು ವರ್ಷದ ಬಾಲಕಿ…ಆಮೇಲಾಗಿದ್ದೇನು ?

ಸಿಡ್ನಿ : ಇತ್ತೀಚೆನ ದಿನಗಳಲ್ಲಿ ಮಕ್ಕಳು ಹೊರಗಿನ ಆಟಗಳನ್ನು ಬಿಟ್ಟು ಮೊಬೈಲ್, ಆನ್‌ಲೈನ್‌ ಗೇಮ್‌ಗಳನ್ನು ಆಡಲು ಪ್ರಾರಂಭಿಸಿದ್ದಾರೆ. ಬಯಲಲ್ಲಿ ಆಡಿ ಬೆಳೆಯಬೇಕಿದ್ದ ಮಕ್ಕಳು ಹಗಲು ರಾತ್ರಿಯೆನ್ನದೆ ಮೊಬೈಲ್‌, ಕಂಪ್ಯೂಟರ್‌ಗಳ ಮೊರೆ ಹೋಗುತ್ತಿದ್ದಾರೆ.

ಆನ್‌ಲೈನ್‌ನಲ್ಲಿನ ವಿಡಿಯೋ ಗೇಮ್‌ಗಳಿಗೆ ಇಂದಿನ ಮಕ್ಕಳು ದಾಸರಾಗುತ್ತಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಅನಾಹುತಕಾರಿ ಆಟದಿಂದ ಮಗುವೊಂದನ್ನು ಬಚಾವ್ ಮಾಡಲಾಗಿದೆ. 6 ವರ್ಷದ ಮಗುವೊಂದು ಆನ್‌ಲೈನ್‌ನಲ್ಲಿ ಆಟವಾಡುತ್ತಾ ಅಚಾನಕ್ಕಾಗಿ ಅದರಲ್ಲಿದ್ದ ಸೆಕ್ಸ್ ರೂಂ  ನಂತಹ ಆಟಕ್ಕೆ ಮುಂದಾಗಿದ್ದಾಳೆ. ಆ ಮಗುವಿಗೆ ಯಾವುದೇ ಅರಿವಿಲ್ಲದಿದ್ದರೂ ಆಟ ಆಡುತ್ತಾ ಹೋಗಿದ್ದಾಳೆ. ಇದ್ದಕ್ಕಿದ್ದಂತೆ ಮಗುವಿನ ಬಳಿ ಬಂದ ತಾಯಿ ಇದನ್ನು ಗಮನಿಸಿ ಆಟ ನಿಲ್ಲಿಸಿದ್ದಾಳೆ.

ಆನ್‌ಲೈನ್ ಗೇಮೊಂದರಲ್ಲಿ ಪರಸ್ಪರ ಬೇರೆ ಬೇರೆ ಸ್ಥಳಗಳಲ್ಲಿ ಕುಳಿತಿರುವ ಇಬ್ಬರು ಒಟ್ಟಿಗೆ ಆಟ ಆಡಬಹುದು. ಈ ವೇಳೆ ಮಗು ಆಟವಾಡುತ್ತಾ ಆತ ಹೇಳಿದ ‘ಸೆಕ್ಸ್ ರೂಂ’ಒಳಗೆ ಹೋಗಲು ಮುಂದಾಗಿದ್ದಾಳೆ. ಇದರಲ್ಲಿ ಗ್ರಾಫಿಕ್ಸ್ ನಲ್ಲಿ ಸೃಷ್ಟಿಸಲಾದ ಗೊಂಬೆಗಳು ಪರಸ್ಪರ ಸೆಕ್ಸ್‌ನಲ್ಲಿ ತೊಡಗಿರುವುದನ್ನು ನೋಡಬಹುದು. ಆದರೆ ಮಗುವಿಗೆ ಇದ್ಯಾವುದರ ಪರಿವೇ ಇಲ್ಲದೇ ಆತ ಕರೆದಿದ್ದ ಕೋಣೆಯೊಳೆಗೆ ಪ್ರವೇಶಿಸಲು ಆಟ ಮುಂದುವರೆಸಿದ್ದಾಳೆ.

ಇದನ್ನು ಗಮನಿಸಿದ ತಾಯಿ ಪೆಗ್ಗಿ ಕೂಡಲೇ ಆಟವನ್ನು ನಿಲ್ಲಿಸಿ, ಮಗು ಕೋಣೆಯೊಳಗೆ ಹೋಗುವುದನ್ನು ತಡೆದಿದ್ದಾಳೆ. ಈ ಆಟದ ನಿಯಮದ ಪ್ರಕಾರ 13 ವಯಸ್ಸಿಗೂ ಮೇಲ್ಪಟ್ಟವರಷ್ಟೇ ಈ ಗೇಮ್  ಆಡಬಹುದು. ಒಂದು ವೇಳೆ ಇದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದರೆ ಪೋಷಕರ ಅನುಮತಿ ಪಡೆದು ಹೆಸರು ನೊಂದಾಯಿಸಿಕೊಳ್ಳಬೇಕಾಗುತ್ತದಂತೆ.

ಏನೇ ಆಗಲಿ ಮಕ್ಕಳ ಕೈಗೆ ಮೊಬೈಲ್‌ ಕೊಡುವಾಗ , ಆನ್‌ಲೈನ್‌ ಗೇಮ್‌ ಆಡುವಾಗ ಪೋಷಕರು ಎಚ್ಚರದಿಂದಿದ್ದರೆ ಒಳಿತು.

Leave a Reply

Your email address will not be published.