ರೆಸಾರ್ಟ್ ರಾಜಕೀಯ ಮುಗೀತು..ಈಗ ದೆಹಲಿ ರಾಜಕೀಯ ಶುರುವಾಗಿದೆ, ಜನರ ಕಷ್ಟ ಅದ್ಯಾವಾಗ ಬಗೆಹರಿಸ್ತಾರೋ….?

ಮಂಗಳೂರು : ಮೋದಿ ಸರ್ಕಾರ ಆಡಳಿತ ಬಗ್ಗೆ ಪೇಜಾವರ ಸ್ವಾಮೀಜಿ ಅತೃಪ್ತಿ ವಿಚಾರ ಸಂಬಂಧ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ. ಪೇಜಾವರ ಸ್ವಾಮೀಜಿ ಸನ್ಯಾಸಿಗಳು. ಅವರಿಗೆ ಮಾಹಿತಿಯ ಕೊರತೆ ಇದೆ. ಮುಂದಿನ‌ ದಿನಗಳಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಅವರಿಗೆ ಮಾಹಿತಿ ನೀಡುತ್ತೇವೆ. ಯಾವ ಆಧಾರದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.

ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಂಗಾ ಶುದ್ದೀಕರಣ ಒಂದೇ ಹಂತದಲ್ಲಿ ಮುಗಿಸುವ ಕಾರ್ಯವನ್ನು ಸರ್ಕಾರ ಕೈಗೆತ್ತುಕೊಂಡಿತ್ತು. ಇದು ಸಣ್ಣ ಕಾರ್ಯ ಅಲ್ಲ ಲಾಂಗ್ ಟರ್ಮ್ ಪ್ರಾಜೆಕ್ಟ್ ನಲ್ಲಿ ಕೆಲಸ ನಡೀತಿದೆ. ಕಪ್ಪು ಹಣ ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದೇವೆ. ಪೆಟ್ರೋಲ್ ದರ ಏರಿಕೆ ವಿಚಾರ ಅಂತರಾಷ್ಟ್ರೀಯ ಮಾರುಕಟ್ಟೆಯಿಂದ ನಿರ್ಧಾರವಾಗುತ್ತೆ ಎಂದಿದ್ದಾರೆ.

ಇಂಧನ ಖಾತೆಗೆ ಬೇಡಿಕೆ ವಿಚಾರ ಸಂಬಂಧ ಹೇಳಿಕೆ ನೀಡಿರುವ ಶೋಭಾ, ಯಾಕೆ ಇಷ್ಟೊಂದು ಪಟ್ಟು ಹಿಡಿದು ಕೇಳ್ತಿದ್ದಾರೆ ಎಂಬುವುದು ಗೊತ್ತಿಲ್ಲ . ಕಳೆದ ಸರ್ಕಾರದ ಅಕ್ರಮಗಳನ್ನು ಮುಚ್ಚಿಹಾಕಲು ಕೇಳ್ತಿರಬೇಕು . ಸರ್ಕಾರ ರಚನೆಯಾಗಿ ಎರಡು ವಾರ ಕಳೆದರೂ ಮಂತ್ರಿ ಮಂಡಲ ರಚನೆಯಾಗಿಲ್ಲ. ಖಾತೆಗಾಗಿ ಕಿತ್ತಾಟ ನಡೆಯುತ್ತಿದೆಯೇ ಹೊರತು ಜನರ ಸಮಸ್ಯೆ ಬಗೆಹರಿಯುತ್ತಿಲ್ಲ. ರೆಸಾರ್ಟ್ ರಾಜಕೀಯ ಮುಗಿಸಿ ಈಗ ದೆಹಲಿ ರಾಜಕಾರಣ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೇರಾವ ಕೆಲಸ ಸರ್ಕಾರದಿಂದ ನಡೆಯುತ್ತಿಲ್ಲ  ಎಂದು ಕಿಡಿಕಾರಿರುವ ಶೋಭಾ, ಉಡುಪಿ ದನ ಸಾಗಾಟದಾರನ ಕೊಲೆ ಪ್ರಕರಣ ವಿಚಾರ ದಲ್ಲಿ ಬಿಜೆಪಿ ಹಾಗೂ ಸಂಘಪರಿವಾರವನ್ನು ಟಾರ್ಗೆಟ್ ಮಾಡಲಾಗ್ತಿದೆ. ನಮ್ಮ ಕಾರ್ಯಕರ್ತರು ಪೊಲೀಸರಿಗೆ ತಿಳಿಸೋ ಕೆಲಸ ಮಾಡಿದ್ದಾರೆ. ಹುಸೈನಬ್ಬಾ ಹೇಗೆ ಸತ್ತಿದ್ದಾರೆ ಎಂಬುವುದು ಗೊತ್ತಿಲ್ಲ.  ರಾಜ್ಯ ಸರ್ಕಾರದ ಆದೇಶದ ಮೇರೆಗೆ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ. ಇದರ ವಿರುದ್ಧ ನಾಳೆ ಉಡುಪಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಸತ್ತವರಿಗೆ ನ್ಯಾಯ ಸಿಗಬೇಕು ಪೊಲೀಸ್ ಜೀಪಲ್ಲಿ ಯಾಕೆ ಸತ್ತಿದ್ದಾರೆ ಎಂದು ಗೊತ್ತಾಗಬೇಕು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com