Football : ಕೀನ್ಯಾ ವಿರುದ್ಧ ಗೆದ್ದ ಭಾರತ : 100ನೇ ಪಂದ್ಯದಲ್ಲಿ 2 ಗೋಲ್ ಬಾರಿಸಿದ ಸುನಿಲ್ ಚೆಟ್ರಿ

ಮುಂಬೈನ ಫುಟ್ಬಾಲ್ ಅರೆನಾ ಮೈದಾನದಲ್ಲಿ ಸೋಮವಾರ ನಡೆದ ಇಂಟರ್ ಕಾಂಟಿನೆಂಟಲ್ ಪಂದ್ಯದಲ್ಲಿ ಕೀನ್ಯಾ ವಿರುದ್ಧ ಭಾರತ 3-0 ಗೋಲುಗಳ ಅಂತರದ ಜಯ ಗಳಿಸಿದೆ. ಭಾರತದ ಪರವಾಗಿ ನಾಯಕ ಸುನಿಲ್ ಚೆಟ್ರಿ ಹಾಗೂ ಜೆಜೆ ಗೋಲ್ ಬಾರಿಸಿ ಗೆಲುವಿಗೆ ಕಾರಣರಾದರು.

ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ 2 ಗೋಲ್ ಬಾರಿಸುವ ಮೂಲಕ ತಮ್ಮ ನೂರನೇ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. 68ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಯನ್ನು ಗೋಲ್ ಆಗಿ ಪರಿವರ್ತಿಸಿದ ಸುನಿಲ್, 90+1 ನಿಮಿಷದಲ್ಲಿ ಎರಡನೇ ಗೋಲ್ ದಾಖಲಿಸಿ ಜಯದ ಅಂತರವನ್ನು ಹೆಚ್ಚಿಸಿದರು. ಭಾರತದ ಪರವಾಗಿ ಜೆಜೆ 71ನೇ ನಿಮಿಷದಲ್ಲಿ ಗೋಲ್ ಗಳಿಸಿದರು.

ಮೊದಲ ಪಂದ್ಯದಲ್ಲಿ ಭಾರತ ಚೈನೀಸ್ ತೈಪೇ ವಿರುದ್ಧ 5-0 ಅಂತರದ ಜಯ ಸಾಧಿಸಿತ್ತು. ಟೂರ್ನಿಯಲ್ಲಿ ಸತತ ಎರಡನೇ ಜಯ ಸಾಧಿಸಿರುವ ಭಾರತ 6 ಅಂಕಗಳನ್ನು ಗಳಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com