ಸಂವಿಧಾನ ಅಪಾಯದಲ್ಲಿದೆ, ಜನ ಅಭದ್ರತೆಯಲ್ಲಿ ಬದುಕುತ್ತಿದ್ದಾರೆ : ಗೋವಾ ಆರ್ಚ್ ಬಿಷಪ್ ಆತಂಕ

‘ ನಮ್ಮ ದೇಶದ ಸಂವಿಧಾನ ಅಪಾಯದಲ್ಲಿದೆ, ಜನ ಅಭದ್ರತೆಯಲ್ಲಿ ಬದುಕುತ್ತಿದ್ದಾರೆ ‘ ಎಂದು ಗೋವಾದ ಆರ್ಚ್ ಬಿಷಪ್ ಫಾದರ್ ಫಿಲಿಪ್ ನೆರಿ ಫೆರಾವೊ ಹೇಳಿದ್ದಾರೆ. ಗೋವಾ ಹಾಗೂ ದಮನ್ ನಲ್ಲಿ ವಾಸಿಸುತ್ತಿರುವ ಕ್ರಿಶ್ಚಿಯನ್ ಸಮುದಾಯದವರನ್ನು ಉದ್ಧೇಶಿಸಿ ಪತ್ರವೊಂದನ್ನು ಬರೆದಿರುವ ಆರ್ಚ್ ಬಿಷಪ್, ಈ ಮಾತನ್ನು ಹೇಳಿದ್ದಾರೆ.

Image result for goa archbishop

‘ ಇತ್ತೀಚೆಗೆ ನಮ್ಮ ದೇಶದಲ್ಲಿ ಒಂದು ಟ್ರೆಂಡ್ ಬೆಳೆದು ಬರುತ್ತಿದೆ. ಅದೇನೆಂದರೆ ನಮ್ಮ ಆಹಾರ ಪದ್ಧತಿ, ಉಡುಗೆ, ಜೀವನ ಶೈಲಿ ಮತ್ತು ಧಾರ್ಮಿಕ ನಂಬಿಕೆಗಳಲ್ಲಿಯೂ ಸಹ ಏಕರೂಪತೆಯನ್ನು ಹೇರುವ ಪ್ರಯತ್ನ ನಡೆಯುತ್ತಿದೆ. ಮಾನವ ಹಕ್ಕುಗಳು ಅಪಾಯದಲ್ಲಿದ್ದು, ಪ್ರಜಾಪ್ರಭುತ್ವ ವಿನಾಶದ ಕಡೆಗೆ ಸಾಗುತ್ತಿದೆ ‘ ಎಂದು ಬರೆದಿದ್ದಾರೆ.

ನಮ್ಮ ದೇಶದ ಸಂವಿಧಾನ ಅಪಾಯದಲ್ಲಿದೆ. ಅದೇ ಕಾರಣದಿಂದಾಗಿ ಜನ ಅಭದ್ರತೆಯಲ್ಲಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಾರ್ವತ್ರಿಕ ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ, ನಾವು ನಮ್ಮ ಸಂವಿಧಾನದ ಬಗ್ಗೆ ತಿಳಿಸುಕೊಳ್ಳುವ ಹಾಗೂ ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ ‘ ಎಂದು ಪತ್ರದಲ್ಲಿ ಬರೆದಿದ್ದಾರೆ.

Leave a Reply

Your email address will not be published.