4 ಕ್ವಿಂಟಲ್‌ ತೂಕದ ರೋಲರ್‌ ಎತ್ತಿದ ಕಲಿಯುಗದ ಬಲಭೀಮರು : ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗ್ತಿದೆ ವಿಡಿಯೋ..

ಗದಗ : ಕೆಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್‌ ಅವರು ಆರಂಭಿಸಿರುವ  ಹಮ್‌ ಫಿಟ್‌ ಹೇ ತೋ ಇಂಡಿಯಾ ಫಿಟ್ ಎಂಬ ಆಂದೋಲನ ಆರಂಭಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಚಾಲೆಂಜ್‌ ಎಲ್ಲೆಡೆ ವೈರಲ್ ಆಗುತ್ತಿದ್ದು, ಕ್ರಿಕೆಟಿಗರು, ಸೆಲೆಬ್ರಿಟಿಗಳೂ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ.

ಇದರ ಬೆನ್ನಲ್ಲೇ, ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಯುವಕರು ಈ ಸವಾಲನ್ನು ಸ್ವಿಕರಿಸಿದ್ದು, ನಾಲ್ಕು ಕ್ವಿಂಟಾಲ್ ತೂಕದ ರೂಲರ್ ಎತ್ತಿದ್ದಾರೆ.
ಕೊಣ್ಣೂರ ಗ್ರಾಮದ ಹಲವಾರು ಯುವಕರು ಗ್ರಾಮದ ಬಳಿ ಇರುವ ಶೇಕರಗೌಡ ಸಾಲಿಗೌಡ್ರ ಅವರ ಡಾಬಾ ಮುಂದಿರುವ 4 ಕ್ವಿಂಟಾಲ್ ತೂಕದ ರೂಲರ್ ಎತ್ತಿ ಹಮ್ ಫಿಟ್ ಹೈ ತೋ ಇಂಡಿಯಾ ಫಿಟ್ ಎಂಬ ಟ್ಯಾಗ್ ಲೈನ್ ಹಾಕಿ ಸಮಾಜಿಕ ಜಾಲತಾಣಗಳಲ್ಲಿ ಹರಿಬಿಡುತಿದ್ದಾರೆ. ಫೇಸ್‌ಬುಕ್‌ನಲ್ಲಿ ಈ ವಿಜಿಯೋ ನೋಡಿದ ಯುವಕರು ನಾವು ಒಂದು ಕೈ ನೋಡೋಣ ಎಂದು ಸಾಲಿಗೌಡ್ರ ಡಾಭಾದತ್ತ ಹೋಗುತ್ತಿದ್ದು, ಭಾರ ಎತ್ತಿರುವ ಯುವಕರಿಗೆ ಎಲ್ಲರೂ ಶಹಬ್ಬಾಸ್ ಗಿರಿ  ನೀಡಿದ್ದಾರೆ.

Leave a Reply

Your email address will not be published.