ಪ್ರಪ್ರಥಮ ಬಾರಿಗೆ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ನೀಡಿದ ಸೌದಿ ಅರೇಬಿಯಾ

ಸೌದಿ ಅರೇಬಿಯಾ ಆಡಳಿತ ಇದೇ ಮೊದಲ ಬಾರಿಗೆ ತನ್ನ ಮಹಿಳಾ ನಾಗರಿಕೆರಿಗೆ ಡ್ರೈವಿಂಗ್ ಲೈಸೆನ್ಸ್ ನೀಡಿದೆ. ಮುಂದಿನ ಮೂರು ವಾರಗಳ ಅವಧಿಯಲ್ಲಿ ಮಹಿಳೆಯರ ವಾಹನ ಚಾಲನೆಯ ಮೇಲಿದ್ದ ನಿಷೇಧವನ್ನು ತೆರವುಗೊಳಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಿಯಾದ್ ನಗರದಲ್ಲಿ 10 ಮಹಿಳೆಯರಿಗೆ ಡ್ರೈವಿಂಗ್ ಲೈಸನ್ಸ್ ನೀಡಲಾಗಿದೆ.

ಸೌದಿ ಅರೇಬಿಯಾದಿಂದ ಸದ್ಯ ವಾಹನ ಚಲಾಯಿಸುವ ಪರವಾನಗಿಯನ್ನು ಪಡೆದಿರುವ 10 ಮಹಿಳೆಯರು ಇದಕ್ಕೂ ಮೊದಲು ಅಮೇರಿಕಾ, ಬ್ರಿಟನ್, ಲೆಬನಾನ್ ಹಾಗೂ ಕೆನಡಾ ದೇಶಗಳಿಂದ ಡ್ರೈವಿಂಗ್ ಲೈಸನ್ಸ್ ಪಡೆದುಕೊಂಡವರೇ ಆಗಿದ್ದಾರೆ.

ಮಹಿಳೆಯರಿಗೆ ಕಾರು ಚಲಾಯಿಸುವ ಹಕ್ಕನ್ನು ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ, ಚಳುವಳಿ ನಡೆಸಿದ್ದ ಕೆಲವರನ್ನು ಸೌದಿ ಆಡಳಿತ ಬಂಧನಕ್ಕೊಳಪಡಿಸಿತ್ತು. ಆದರೆ ಅವರನ್ನು ಇದುವರೆಗೆ ಬಿಡುಗಡೆಗೊಳಿಸಲಾಗಿಲ್ಲ.

Leave a Reply

Your email address will not be published.