‘ಕಾಲ’ನ ಹಿಂದೆ ಕಾವೇರಿ ವಿಷಯವಿದೆ, ರಾಜಕೀಯಕ್ಕಾಗಿ ಸಿನಿಮಾವನ್ನು ಬಲಿಯಾಗಿಸಬೇಡಿ : ನಟ ರಮೇಶ್ ಅರವಿಂದ್

ಮೈಸೂರು : ರಜನೀಕಾಂತ್ ಅಭಿನಯದ ಕಾಲ ಚಿತ್ರ ಕುರಿತು ನಟ ರಮೇಶ್‌ ಅರವಿಂದ್ ಪ್ರತಿಕ್ರಿಯಿಸಿದ್ದಾರೆ. ಇದೊಂದು ಭಾವನಾತ್ಮಕ ವಿಷಯ. ನಾನು ಇದನ್ನು ಮಾತನಾಡುವಷ್ಟು ದೊಡ್ಡವನಲ್ಲ. ಕಾಲನ ಹಿಂದೆ ಕಾವೇರಿ ವಿಷಯ ಕೂಡ ಅಡಗಿದೆ. ಇದೇ ಸರಿ ಎಂದು ಉತ್ತರ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ನಮಗೆ ಕೇವಲ ಒಂದು ಆ್ಯಂಗಲ್ ಗೊತ್ತು ಅಷ್ಟೇ. ಅದರ ಮತ್ತೊಂದು ಆ್ಯಂಗಲ್ ಗೊತ್ತಿಲ್ಲ. ಇದು ನೂರಾರು ವರ್ಷಗಳಿಂದ‌ ನಡೆಯುತ್ತಿರುವ ಸಂಘರ್ಷ. ಇದರ ಬಗ್ಗೆ ಹಲವರು ಹಲವಾರು ಅಭಿಪ್ರಾಯ ಮಂಡಿಸಿದ್ದಾರೆ. ಈ ಕುರಿತು, ಈ ಸಂದರ್ಭದಲ್ಲಿ ನಾನು ಮಾತನಾಡುವುದು ಸಮಂಜಸವಲ್ಲ. ಯಾವುದಾದರೂ ರೋಗ ಎದುರಾದರೆ ಆ ರೋಗಕ್ಕೆ ಆ ವೈದ್ಯರೇ ಮದ್ದು ಕೊಡಬೇಕು. ಬೇರೆ ವೈದ್ಯರು ಆ ರೋಗಕ್ಕೆ ಮದ್ದು ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಇದು ಇಂಡಿಯಾ – ಪಾಕಿಸ್ತಾನದ ವಿಷಯವಲ್ಲ, ಅಥವಾ ಕರ್ನಾಟಕ / ತಮಿಳುನಾಡು ವಿಷಯ ಕೂಡ ಅಲ್ಲ. ತಮಿಳುನಾಡಿನ ಒಳಗೆ ಕರ್ನಾಟಕ, ಕರ್ನಾಟಕದ ಒಳಗಡೆ ತಮಿಳುನಾಡಿನ ಬಾಂಧ್ಯವ್ಯದ ವಿಷಯ. ನೂರು ವರ್ಷ ಬಗೆಹರಿಯದ ಸಮಸ್ಯೆಯನ್ನ ಮತ್ತೆ ನೂರು ವರ್ಷ ಎಳೆಯಬಾರದು.  ಹೇಗಾದರೂ ಸರಿಯೇ ಅದರ ಪರಿಹಾರಕ್ಕೆ ಮುಂದಾಗಬೇಕು. ಅದಕ್ಕೆ ಬೇಕಾದಂತಹ ಎಲ್ಲಾ ಕ್ರಮಕ್ಕೂ ನಾವು ಸಿದ್ಧರಿರಬೇಕು. ರಾಜಕೀಯಕ್ಕಾಗಿ ಸಿನಿಮಾವನ್ನು ಬಲಿಯಾಗಿಸಬಾರದು ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com