DCM ಆಗಿದ್ದಕ್ಕೆ ಪರಮೇಶ್ವರ್ ಮೆರೀತಿದ್ದಾನೆ, ಆಯಪ್ಪ ಅಧ್ಯಕ್ಷ ಅಂತ ಹೇಳೋಕೆ ನಾಚಿಕೆಯಾಗುತ್ತೆ : ಕಾಂಗ್ರೆಸ್‌ ನಾಯಕ !!

ರಾಮನಗರ : ಅದೃಷ್ಟ ಅನ್ನೋದು ಒಂದೊಂದು ಸಲ ಕೆಲಸ ಮಾಡುತ್ತದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ವಿರುದ್ಧ ವಿಧಾನಪರಿಷತ್‌ ಸದಸ್ಯ ಸಿ.ಎಂ ಲಿಂಗಪ್ಪ ವ್ಯಂಗ್ಯವಾಡಿದ್ದಾರೆ.

ದೇವೇಗೌಡರು ನಾನು ನನ್ನ ಮಗನನ್ನ ಸಿಎಂ ಮಾಡುವ ವರೆಗೂ ವಿರಮಿಸುವುದಿಲ್ಲ ಎಂದಿದ್ದರು. ಕುಮಾರಸ್ವಾಮಿ ಕೂಡ ಮುಂದಿನ 5 ವರ್ಷ ಕೂಡ ನಾನೇ ಸಿಎಂ ಎಂದು ಬಿಂಬಿಸಿದರು. ನಮ್ಮಲ್ಲೂ ಸಿದ್ದರಾಮಯ್ಯ ನಾನೇ ಸಿಎಂ ಎನ್ನುತ್ತಿದ್ದರು, ಬಿಜೆಪಿ ಯಿಂದ ಯಡಿಯೂರಪ್ಪ ಸಿಎಂ ಎನ್ನುತ್ತಿದ್ದರು. ಆದರೆ ಕಡೆಗೆ ಅದೃಷ್ಟ ಕತ್ತೆ ಕಾಲು ಕಾಯುತ್ತೆ. 37 ಸ್ಥಾನ ಪಡೆದ ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಪಕ್ಷ ಕುಮಾರಸ್ವಾಮಿಯವರ ಮನೆಬಾಗಿಲಿಗೆ ಹೋಗಿ ಅಧಿಕಾರ ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಇದು ಕಾಂಗ್ರೆಸ್ ಪಕ್ಷದ ಹಣೆಬರಹ. ಪರಮೇಶ್ವರ್ ಇವತ್ತು ಬಹಳ ಮೆರೆಯುತ್ತಿದ್ದಾರೆ. ಕೊರಟಗೆರೆಯಲ್ಲಿ ಗೆದ್ದು ಡಿಸಿಎಂ ಆದ್ರೂ, ಅವರಿಗೆ ಅಷ್ಟೇ ಸಾಕು ಅನಿಸುತ್ತೆ, ಜೀವನದಲ್ಲಿ ಇನ್ನೇನು ಬೇಕಾಗಿಲ್ಲ . ಸಿಎಂ ಆಗಬೇಕು ಅನ್ನೋ ಛಲ ಇಲ್ಲ ಆ ಮನುಷ್ಯನಿಗೆ. ಈಗ ರಾಮನಗರವನ್ನು ಮಾರಾಟ ಮಾಡ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದು ಪಕ್ಷವನ್ನ, ನಮ್ಮನ್ನ, ನಮ್ಮ ಹೆಂಡತಿ ಮಕ್ಕಳನ್ನು ಸೋಲ್ಡ್ ಔಟ್ ಮಾಡ್ತಿದ್ದಾರೆ. ರಾಮನಗರ ಕ್ಷೇತ್ರದ ಬಗ್ಗೆ ಮಾತನಾಡುವಾಗ ನಮ್ಮನ್ನ ಒಂದು ಮಾತು ಕೇಳುವ ಸೌಜನ್ಯವಿಲ್ಲ ಆಯಪ್ಪನಿಗೆ. ನಮ್ಮ ಅಧ್ಯಕ್ಷ ಅಂತಾ ಹೇಳೋಕೆ ನಾಚಿಕೆಯಾಗುತ್ತೆ. ನಮಗೆಲ್ಲ ವಿಷ ಕೊಡಲಿ, ಇಡೀ ಕಾಂಗ್ರೆಸ್ ಸಮೂಹ ಸಾಯುತ್ತೇವೆ. ಇಂತಹ ಅಧ್ಯಕ್ಷರ ಜೊತೆ ಇರುವ ಬದಲು, ರಾಜಕೀಯ ನಿವೃತ್ತಿಯಾಗುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮನಗರ ಕ್ಷೇತ್ರದ ಉಪಚುನಾವಣೆ ಜೆಡಿಎಸ್ ಗೆ ಬಿಟ್ಟುಕೊಡುವ ಬಗ್ಗೆ ಮಾತನಾಡಿರುವುದಕ್ಕೆ ಸಿ.ಎಂ.ಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ಡಿ.ಕೆ.ಶಿವಕುಮಾರ್ ಕೆಲಸಕಾರ್ಯವನ್ನ ಮೆಚ್ಚುವ ವರ್ಗ ಇದೆ, ಅಸೂಯೆ ಪಡುವ ವರ್ಗವೂ ಇದೆ, ಅದು ನಮ್ಮ ಕಾಂಗ್ರೆಸ್ ನಲ್ಲೂ ಇದೆ. ಇವನನ್ನ ತುಳಿದರೆ ನಾವು ಮೇಲೆ ಬರಬಹುದು ಎಂಬ ಸ್ವಾರ್ಥ ಇದೆ. ಎಲ್ಲ ಪಕ್ಷದಲ್ಲೂ ಈ ಸಂಸ್ಕ್ರತಿ ಇದೇ, ಆ ದೊಡ್ಡ ಕಾಯಿಲೆ ಕಾಂಗ್ರೆಸ್ ನಲ್ಲೂ ಇದೆ. ಮಂತ್ರಿ ಸ್ಥಾನ ತಪ್ಪಿದರೆ ಸಾಕು ಎಂದು ಕಾಯುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಇಲ್ಲದಿದ್ದರೆ ಕಾಂಗ್ರೆಸ್ ನಿಂದ 20 ಜನ ಶಾಸಕರು ಬಿಜೆಪಿಗೆ ಹೋಗುತ್ತಿದ್ದರು. ಅದನೆಲ್ಲ ತಪ್ಪಿಸಿ ಪಕ್ಷವನ್ನ ಉಳಿಸಿದರು. ಡಿ.ಕೆ.ಶಿವಕುಮಾರ್ ನ ವಿರೋಧಿಗಳು ಅವರ ಹತ್ತಿರದಲ್ಲೇ ಇದ್ದಾರೆ. ವರ್ಷದ ಹಿಂದೆಯೇ ಕೆ.ಪಿ.ಸಿ.ಸಿ ಅಧ್ಯಕ್ಷರನ್ನ ಬದಲಿಸಬೇಕೆಂದು ಕೂಗು ಕೇಳಿ ಬಂದಿತ್ತು. ಆಗ ಶಿವಕುಮಾರ್ ಗೆ ತೀರಾ ಹತ್ತಿರವಿದ್ದೋರೆ ಅವರಿಗೆ ವಿರೋಧ ಮಾಡಿದರು. ಸಿದ್ದರಾಮಯ್ಯನವರೇ ಈ ಬಾರಿ ಸಿಎಂ ಆಗಲಿ, ನಾನು ಕಾಯುತ್ತೇನೆ, ವಯಸ್ಸಿದೆ ಎಂದು ಶಿವಕುಮಾರ್ ಹೇಳಿದ್ದರು ಎಂದು ಲಿಂಗಪ್ಪ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com