WATCH : ಕೆರೆಹಾವನ್ನು ನುಂಗಲಾರದೆ ಒದ್ದಾಡುತ್ತಿದ್ದ ಕಾಳಿಂಗನ ರಕ್ಷಣೆ ಮಾಡಿದ ಉರಗ ತಜ್ಞ

ಚಿಕ್ಕಮಗಳೂರು : ಕೆರೆಯ ದಡದ ಬಳಿ ನೀರಲ್ಲಿ ಆಟವಾಡುತ್ತಿದ್ದ ಕೆರೆ ಹಾವನ್ನು ಅರ್ಧ ನುಂಗಿ ದಡದಲ್ಲೇ ಬಿದ್ದಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪವನ್ನ ರಕ್ಷಿಸಿ ಕಾಡಿಗೆ ಬಿಟ್ಟಿರುವ ಸಂಗತಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮಹಲ್ ಗೋಡು ಗ್ರಾಮದಲ್ಲಿ ನಡೆದಿದೆ.

ಕೊಪ್ಪ ತಾಲೂಕಿನ ಮಹಲ್ ಗೋಡು ಗ್ರಾಮದ ಕೆರೆಯ ದಡದಲ್ಲಿದ್ದ ಸುಮಾರು 10 ಅಡಿ ಕಾಳಿಂಗನನ್ನ ರಕ್ಷಿಸಿರೋ ಉರಗ ತಜ್ಞ ಹರೀಂದ್ರ ಕಾಳಿಂಗ ಹಾವನ್ನ ಪುನಃ ಕಾಡಿಗೆ ಬಿಟ್ಟಿದ್ದಾರೆ. ಬರೋಬ್ಬರಿ 10 ಅಡಿ ಉದ್ದದ ಹಾವನ್ನ ಕಂಡು ಸ್ಥಳಿಯರು ಆಶ್ಚರ್ಯಗೊಂಡಿದ್ದರು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳ ಸಹಾಯ ಪಡೆದು ಕಾಳಿಂಗನನ್ನ ರಕ್ಷಿಸಿ ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಹುತ್ತ, ದೊಡ್ಡ-ದೊಡ್ಡ ಮರದ ಪೊಟರೆಗಳಲ್ಲಿ ಇರುತ್ತಿದ್ದ ಕಾಳಿಂಗ ಸರ್ಪಗಳು ನೀರಲ್ಲಿನ ಮೀನು, ಹಾವು, ಕಪ್ಪೆಗಳನ್ನ ತಿನ್ನಲು ಹಳ್ಳಕ್ಕೆ ಇಳಿಯುತ್ತಿವೆ. ಕಳೆದ ಎರಡು ತಿಂಗಲ್ಲಿ ಕಾಫಿನಾಡಿನ ವಿವಿಧ ಭಾಗದಲ್ಲಿ 10 ಕ್ಕೂ ಹೆಚ್ಚು ಬೃಹತ್ ಕಾಳಿಂಗ ಸರ್ಪಗಳನ್ನು ರಕ್ಷಿಸಿರುವ ಸ್ಥಳಿಯ ಉರಗ ತಜ್ಞರು ಅರಣ್ಯಕ್ಕೆ ಬಿಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com