ಮಣ್ಣಿನ ಮಕ್ಕಳೆಂಬ ಪೇಟೆಂಟ್‌ ಪಡೆದವರಿಗೆ ಲಾಭದಾಯಕ ಹುದ್ದೆಯೇಕೆಬೇಕು : ಸಿ.ಟಿ ರವಿ ವ್ಯಂಗ್ಯ

ಚಿಕ್ಕಮಗಳೂರು : ಕಾಂಗ್ರೆಸ್ – ಜೆಡಿಎಸ್ ಖಾತೆ ಹಂಚಿಕೆ ವಿಚಾರವಾಗಿ ನಡೆಯುತ್ತಿರುವ ಕಸರತ್ತಿಗೆ ಬಿಜೆಪಿ ನಾಯಕ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.

ಪರೋಕ್ಷವಾಗಿ ದೇವೇಗೌಡ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿರುವ ರವಿ, ಮಣ್ಣಿನ ಮಕ್ಕಳು ಎಂದು ಹುಟ್ಟುವಾಗಲೇ ಪೇಟೆಂಡ್ ಪಡೆದವರು ಲಾಭದಾಯಕ ಖಾತೆಗಳನ್ನು ಏಕೆ ಕೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಜೆಡಿಎಸ್‌ನ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಇವರೆಲ್ಲರೂ ನಾವು ಯಾವಾಗಲೂ ನಾವು ಮಣ್ಣಿನ ಮಕ್ಕಳು ಎನ್ನುತ್ತಿರುತ್ತಾರೆ. ಹಾಗೆನ್ನುವವರಿಗೆ ಕೃಷಿ, ಪಶು ಸಂಗೋಪನೆ, ತೋಟಗಾರಿಕೆ, ಸಣ್ಣ ನೀರಾವರಿ ಖಾತೆ ಯಾಕೆ ಬೇಡ ?. ಮಣ್ಣಿ ನ ಮಕ್ಕಳಿಗೆ ಬೇಕಾಗಿರುವುದು ಪವರ್‌, ಪಿಡಬ್ಲ್ಯೂಡಿ, ಅಬಕಾರಿಯಂತಹ ಖಾತೆಗಳು . ಮಣ್ಣಿಗೂ ಈ ಖಾತೆಗಳಿಗೂ ಏನು ಸಂಬಂಧ ಅರ್ಥವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com