ಮದಗಜಗಳ ಕಾಳಗದಲ್ಲಿ ಗೆದ್ದ ಡಿಕೆಶಿ : ಮತ್ತೆ ಟ್ರಬಲ್‌ ಶೂಟರ್‌ಗೆ ಒಲಿದು ಬಂದ “ಪವರ್‌”

ಬೆಂಗಳೂರು : ನಾನು ಫುಟ್‌ಬಾಲೆಲ್ಲ ಆಡಲ್ಲ, ನಂದೇನಿದ್ದರೂ ಚೆಸ್‌ ಆಟ ಎಂದಿದ್ದ ಡಿಕೆಶಿ ಕೊನೆಗೂ ತಮ್ಮ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ಇಷ್ಟು ದಿನ ರೇವಣ್ಣ ಅವರಿಗೆ ನೀಡುವುದಾಗಿ ಹೇಳುತ್ತಿದ್ದ ಇಂಧನ ಖಾತೆಯನ್ನು ಈಗ ಡಿಕೆಶಿಗೆ ವಹಿಸಲಾಗಿದೆ. ಇಂಧನ ಖಾತೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಶಿಫ್ಟ್ ಆಗಿದ್ದು, ಡಿಕೆಶಿ ಪಾಲಿಗೆ ಮತ್ತೆ ಪವರ್ ಖಾತೆ ಒಲಿದಿದೆ.

ಇಂಧನ ಖಾತೆಗಾಗಿ ರೇವಣ್ಣ ಹಾಗೂ ಡಿ.ಕೆ ಶಿವಕುಮಾರ್ ಇಬ್ಬರೂ ಪಟ್ಟು ಹಿಡಿದಿದ್ದರು. ಈ ಬಗ್ಗೆ ಮುಖ್ಯಮಂತ್ರಿಗಳೇ ಬಹಿರಂಗ ಹೇಳಿಕೆ ನೀಡಿದ್ದರು. ಆದರೆ ಇಬ್ಬರೂ ಘಟಾ ನುಘಟಿ ನಾಯಕರಾದ ಹಿನ್ನೆಲೆಯಲ್ಲಿ ಇಬ್ಬರ ಮನವೊಲಿಸುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಅಲ್ಲದೆ ಈ ಮಧ್ಯೆ ರೇವಣ್ಣ ಪಿಡಬ್ಲ್ಯೂಡಿ ಖಾತೆಯನ್ನೂ ನೀಡುವಂತೆ ಪಟ್ಟು ಹಿಡಿದಿದ್ದು, ಜೆಡಿಎಸ್‌ನಲ್ಲಿ ಅಣ್ಣ ತಮ್ಮಂದಿರ ಮಧ್ಯೆ ಅಸಮಾಧಾನಕ್ಕೆ ಕಾರಣವಾಗಿತ್ತು.

ಆದರೆ ಇಂದು ದೇವೇಗೌಡರು ರೇವಣ್ಣ  ಅವರ ಮನವೊಲಿಸಿದ್ದು, ಡಿಕೆಶಿಗೆ ಇಂಧನ ಖಾತೆ ಬಿಟ್ಟುಕೊಡಲು ರೇವಣ್ಣ ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ನೀಡಿದ್ದಾರೆ. ದೇವೇಗೌಡರ ನಿರ್ಧಾರದಂತೆ ಡಿಕೆ ಶಿವಕುಮಾರ್ ಅವರಿಗೆ ಇಂಧನ ಖಾತೆ ಹಾಗೂ ರೇವಣ್ಣ ಅವರಿಗೆ ಲೋಕೋಪಯೋಗಿ ಖಾತೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com