Football : 100ನೇ ಅಂತರಾಷ್ಟ್ರೀಯ ಪಂದ್ಯದ ಸಂಭ್ರಮದಲ್ಲಿ ಸುನಿಲ್ ಚೆಟ್ರಿ

ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೇಟ್ರಿ ಸೋಮವಾರ ತಮ್ಮ 100ನೇ ಅಂತರಾಷ್ಟ್ರೀಯ ಪಂದ್ಯವನ್ನಾಡಲಿದ್ದಾರೆ. ಮುಂಬೈನ ಫುಟ್ಬಾಲ್ ಅರೆನಾ ಮೈದಾನದಲ್ಲಿ ಸೋಮವಾರ ಕೀನ್ಯಾ ವಿರುದ್ಧ ನಡೆಯಲಿರುವ ಇಂಟರ್ ಕಾಂಟಿನೆಂಟಲ್ ಕಪ್ ಟೂರ್ನಿಯ ಪಂದ್ಯ, ಸುನಿಲ್ ಪಾಲಿಗೆ 100ನೇ ಪಂದ್ಯವಾಗಿರಲಿದೆ.

ಈ ಮೂಲಕ ಸುನಿಲ್ ಚೇಟ್ರಿ 100 ಅಂತರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನಾಡಿದ ಸಾಧನೆ ಮಾಡಿದ ಎರಡನೇ ಭಾರತೀಯ ಎನಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ಭಾಯಿಚುಂಗ್ ಭುಟಿಯಾ ಭಾರತದ ಪರವಾಗಿ ಈ ಸಾಧನೆ ಮಾಡಿದ್ದರು.

100ನೇ ಪಂದ್ಯವನ್ನಾಡುತ್ತಿರುವ ಸುನಿಲ್ ಚೇಟ್ರಿಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com