ಚೆನ್ನೈ : ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ತಮಿಳು ನಟಿಯ ಬಂಧನ..!

ಚೆನ್ನೈ ನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ನಟಿ ಸಂಗೀತಾ ಬಾಲನ್ ಅವರನ್ನು ಪೋಲೀಸರು ಸೋಮವಾರ ಬಂಧಿಸಿದ್ದಾರೆ. ವೇಶ್ಯಾವಾಟಿಕೆ ಧಂಧೆ ನಡೆಯುತ್ತಿರುವ ಶಂಕೆಯ ಮೇಲೆ ಚೆನ್ನೈನ ರೆಸಾರ್ಟ್ ಒಂದರ ಮೇಲೆ ದಾಳಿ ಪೋಲೀಸರು ನಡೆಸಿದ್ದಾರೆ. ಅಲ್ಲಿ ಸೆರೆಯಾಗಿದ್ದ ಬೇರೆ ರಾಜ್ಯದ ಅನೇಕ ಯುವತಿಯರನ್ನು ರಕ್ಷಿಸಿ, ಸುರಕ್ಷಾ ಕೇಂದ್ರಗಳಿಗೆ ಕಳುಹಿಸಿದ್ದಾರೆ.

Image result for sangeetha balan sex racket

ಈ ಧಂಧೆ ನಡೆಸುವುದರಲ್ಲಿ ಸಂಗೀತಾಗೆ ನೆರವು ನೀಡುತ್ತಿದ್ದ ಆರೋಪದ ಮೇಲೆ ಸತೀಶ್ ಎಂಬಾತನನ್ನು ಕೂಡ ಬಂಧಿಸಲಾಗಿದೆ. ಬೇರೆ ರಾಜ್ಯದ ಯುವತಿಯರಿಗೆ ಟಿವಿ ಷೋ ಹಾಗೂ ಸಿನೆಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಕರೆತಂದು ಸಂಗೀತಾ ಹತ್ತಿರ ಕಳಿಸುತ್ತಿದ್ದ ಎಂಬ ಆರೋಪ ಈತನ ಮೇಲಿದೆ.

Image result for sangeetha balan sex racket

1996 ರಲ್ಲಿ ತೆರೆ ಕಂಡ ‘ಕರುಪ್ಪು ರೋಜಾ’ ಸಿನೆಮಾದ ಮೂಲಕ ಸಂಗೀತಾ ಬಾಲನ್ ತಮಿಳು ಚಿತ್ರರಂಗವನ್ನು ಪ್ರವೇಶಿಸಿದ್ದರು. ಅಷ್ಟೇ ಅಲ್ಲದೇ ವಾಣಿ ರಾಣಿ, ಚೆಲ್ಲಮೈ ಅವಳ್, ವಲ್ಲಿ ಮುಂತಾದ ಕಿರುತೆರೆ ಕಾರ್ಯಕ್ರಮಗಳಲ್ಲಿ ಅಭಿನಯಿಸಿ ಸಂಗೀತಾ ಜನಪ್ರಿಯರಾಗಿದ್ದರು.

 

Leave a Reply

Your email address will not be published.