WATCH : HDKಗೆ ಮತ ಹಾಕಿದ್ದಕ್ಕೆ ಚನ್ನಪಟ್ಟಣದ ಜನತೆಯನ್ನು ಹಿಗ್ಗಾಮಗ್ಗಾ ಬೈದ ಯೋಗೀಶ್ವರ್ ಅಭಿಮಾನಿಗಳು

ರಾಮನಗರ : ಚನ್ನಪಟ್ಟಣದಲ್ಲಿ ಈ ಬಾರಿ ಸಿ.ಪಿ.ಯೋಗೇಶ್ವರ್ ಸೋತ ಹಿನ್ನೆಲೆಯಲ್ಲಿ  ಕ್ಷೇತ್ರದ ಮತದಾರರ ವಿರುದ್ಧ ಯೋಗೀಶ್ವರ್‌ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಯೋಗೀಶ್ವರ್‌ ಕಣಕ್ಕಿಳಿದಿದ್ದರು. ಆದರೆ ಚನ್ನಪಟ್ಟಣದ ಜನರು ಯೋಗೀಶ್ವರ್ ಅವರು ನೀರಾವರಿ ಯೋಜನೆಗಾಗಿ ಪಟ್ಟ ಶ್ರಮವನ್ನು ಮರೆತು ಜನ ಕುಮಾರಸ್ವಾಮಿಗೆ ಮತ ಹಾಕಿದ್ದಾರೆ. ಜನರು ಮಾಡಿರುವುದು ಸರಿಯಲ್ಲ ಎಂದು ನೀರಾವರಿ ಅಭಿವೃದ್ದಿಯನ್ನ ಮರೆತ ಜನರಿಗೆ ಯೋಗೇಶ್ವರ್ ಅಭಿಮಾನಿಗಳು ಬೈದಿದ್ದಾರೆ.

ಅಲ್ಲದೆ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಈ ವಿಡಿಯೋಗಳು ಫುಲ್‌ ವೈರಲ್ ಆಗಿವೆ.

Leave a Reply

Your email address will not be published.