ಗೂಗಲ್ ಪ್ಲೇ ಸ್ಟೋರ್ ನಿಂದ ಕಾಣೆಯಾದ ಪಂತಂಜಲಿ Kimbho ಆ್ಯಪ್ : ಕಾರಣ ಇಲ್ಲಿದೆ..!

ಕಳೆದ ಬುಧವಾರ ಬಾಬಾ ರಾಮದೇವ್ ನೇತೃತ್ವದ ಪತಂಜಲಿ ಸಂಸ್ಥೆ ಕಿಂಭೋ ಹೆಸರಿನ ಮೆಸೇಜಿಂಗ್ ಆ್ಯಪ್ ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಮರುದಿನ ಅಂದರೆ ಗುರುವಾರವೇ ಗೂಗಲ್ ಪ್ಲೇ ಸ್ಟೋರ್ ನಿಂದ ಕಿಂಭೋ ಆ್ಯಪ್ ಅನ್ನು ತೆಗೆದು ಹಾಕಲಾಗಿತ್ತು.

‘ ಕಿಂಭೋ ಆ್ಯಪ್ ಅನ್ನು ಒಂದು ದಿನದ ಮಟ್ಟಿಗೆ ಟ್ರಯಲ್ ಗಾಗಿ ಬಿಡುಗಡೆಗೊಳಿಸಿ, ಅನಂತರ ತೆಗೆದು ಹಾಕಲಾಗಿತ್ತು. ಕಿಂಭೋ ಆ್ಯಪ್ ಅತಿ ಶೀಘ್ರ ಜನಪ್ರಿಯವಾಗಿ ಕೇವಲ 3 ಗಂಟೆಗಳಲ್ಲಿ 15 ಲಕ್ಷ ಜನ ಡೌನ್ ಲೋಡ್ ಮಾಡಿದ್ದರು ‘ ಪತಂಜಲಿ ಯೋಗಪೀಠದ ವಕ್ತಾರ ಎಸ್.ಕೆ ತಿಜಾರಾವಾಲಾ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫ್ರೆಂಚ್ ಸಂಶೋಧಕ ಎಲಿಯಟ್ ಆ್ಯಲ್ಡರ್ಸನ್ ‘ ಪತಂಜಲಿಯ ಕಿಂಭೋ ಆ್ಯಪ್ ಬಳಕೆದಾರರಿಗೆ ಸುರಕ್ಷಿತವಾಗಿಲ್ಲ. ಯಾರೂ ಸದ್ಯಕ್ಕೆ ಇನ್ಸ್ಟಾಲ್ ಮಾಡಿಕೊಳ್ಳಬೇಡಿ. ಎಲ್ಲ ಬಳಕೆದಾರರ ವೈಯಕ್ತಿಕೆ ಮೆಸೇಜುಗಳನ್ನು ನನಗೆ ಓದಲು ಸಾಧ್ಯವಿದೆ. ಒಂದು ದಿನದ ಮಟ್ಟಿಗೆ ಟ್ರಯಲ್ ಗಾಗಿ ಬಿಡುಗಡೆ ಮಾಡಿದ್ದಾರೆ ಎಂಬ ಹೇಳಿಕೆ ಸುಳ್ಳು ‘ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com