ಪ್ರಕಾಶ್‌ಗೆ ಕಾಸು ಮುಖ್ಯ, ಆದರೆ ನಮಗೆ ಕಾವೇರಿನೇ ಮುಖ್ಯ : ಪ್ರಕಾಶ್ ರೈ ವಿರುದ್ಧ ಪ್ರತಾಪ್ ಸಿಂಹ ಗುಡುಗು

ಮೈಸೂರು : ತಮಿಳಿನ ಕಾಲ ಚಿತ್ರ ಬಿಡುಗಡೆ ವಿಚಾರವಾಗಿ ನಟ ಪ್ರಕಾಶ್ ರೈ ಟ್ವೀಟಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕಾಶ್ ರೈಗೆ ಕಾವೇರಿಗಿಂತ ಕಾಸು ಮುಖ್ಯ. ಆದರೆ ನಮಗೆ ಕಾಸಿಗಿಂತ ಕಾವೇರಿ ಮುಖ್ಯ. ಪ್ರಕಾಶ್ ರೈ ಕರ್ನಾಟಕದ ಪಾಲಿಗೆ ನಿಜವಾಗಿಯೂ ಖಳನಾಯಕನಾಗಿದ್ದಾರೆ. ಈ ಹಿಂದೆ ಸಿನಿಮಾ ಕಾರ್ಯಕ್ರಮದಲ್ಲಿ ಕಾವೇರಿ ವಿಚಾರ ಚರ್ಚೆ ಮಾಡೋಲ್ಲ ಎಂದಿದ್ದರು. ಈಗ ಸಿನಿಮಾಗೂ ಕಾವೇರಿಗೂ ಏನು ಸಂಬಂಧ ಎನ್ನುತ್ತಿದ್ದಾರೆ. ಈ ಮೂಲಕ ಕರ್ನಾಟಕ ಹಾಗೂ ಕಾವೇರಿ ವಿಚಾರವನ್ನು ಕೆಣಕುತ್ತಿರುವುದಾಗಿ ವಾಗ್ದಾಳಿ ನಡೆಸಿದ್ದಾರೆ.

ರೈಗೆ ಕಾಸೇ ಮುಖ್ಯವಾಗಿದೆ. ಅದಕ್ಕಾಗಿ ರಜಿನಿಕಾಂತ್ ಚಿತ್ರದ ಪರ ಟ್ವೀಟ್ ಮಾಡಿದ್ದಾರೆ. ಕಾವೇರಿ ವಿಚಾರದಲ್ಲಿ ರಜಿನಿಕಾಂತ್ ಅಷ್ಟೇ ಅಲ್ಲ ಯಾರೇ ಲಘುವಾಗಿ ಮಾತನಾಡಿದ್ರೂ, ಅದನ್ನು ಖಂಡಿಸುತ್ತೇವೆ. ಕನ್ನಡಪರ ಹೋರಾಟಗಾರರು ಸ್ವಾಭಾವಿಕವಾಗಿ ರಜಿನಿಕಾಂತ್ ಹೇಳಿಕೆಯನ್ನ ವಿರೋಧಿಸಿದ್ದಾರೆ. ಅದಕ್ಕೆ ರಜಿನಿಕಾಂತ್ ಸಲಹೆ ನೀಡಿ ಆಗಿರುವ ಸಮಸ್ಯೆಗೆ ಪರಿಹಾರ ಹುಡಕಬೇಕಿತ್ತು. ಆದರೆ ಅವರು ಆ ಕೆಲಸ ಮಾಡಿಲ್ಲ. ಪ್ರಕಾಶ್ ರೈ ಗೆ ಕಾವೇರಿ ಜೊತೆ ಭಾವನಾತ್ಮಕ ಸಂಬಂಧ ಇಲ್ಲದಿರಬಹುದು. ಆದರೆ ನಮಗಿದೆ ಎಂದಿದ್ದಾರೆ.

ಕಾಲಾ ಸಿನಿಮಾ ಬಿಡುಗಡೆಗೆ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಸಂಬಂದ ಪ್ರಕಾಶ್ ರೈ ಟ್ವೀಟ್ ಮಾಡಿದ್ದು, ಕಾಲಾ ಚಿತ್ರ ಏನು? ಕಾವೇರಿ ಗಲಾಟೆ ಏನು…ಇವೆರಡಕ್ಕೂ ಏನು ಸಂಬಂಧ? ಕಾಲಾ ಚಿತ್ರವನ್ನೇ ಏಕೆ ಗುರಿಯಾಗಿಸುತ್ತಿದ್ದಾರೆ?. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳು ರಾಜ್ಯದಲ್ಲಿ ಕೆಲವರಿಗೆ ಕಾನೂನನ್ನು ಉಲ್ಲಂಘಿಸಲು ಅಧಿಕಾರ ನೀಡುತ್ತಿದೆ. ಪದ್ಮಾವತ್ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಬಿಜೆಪಿ ಇದೆ ರೀತಿ ಮಾಡಿತ್ತು. ಈ ವಿಚಾರವನ್ನು ಜನಸಾಮಾನ್ಯರಿಗೆ ಬಿಡಿ, ಅವರೇ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ಈ ನನ್ನ ಹೇಳಿಕೆಯನ್ನು ಕೆಲವರು ವಿರೋಧಿಸಿ ನನ್ನನ್ನು ಕನ್ನಡ ದ್ರೋಹಿ ಎಂದು ಪಟ್ಟಕಟ್ಟಿದ್ರೂ ಆಶ್ಚರ್ಯಪಡಬೇಕಾಗಿಲ್ಲ. ಇತ್ತೀಚೆಗೆ ಪ್ರಶ್ನಿಸಿದ್ದಕ್ಕೆ ಕೆಲವರು ನನ್ನನ್ನು ದೇಶದ್ರೋಹಿ ಎಂದು ಪಟ್ಟಕಟ್ಟಿದ್ದರು. ಏನೇ ಆದರೂ ನಾನು ಏನು ಹೇಳಬೇಕೋ ಅದನ್ನೇ ಹೇಳಿಯೇ ತಿರುತ್ತೇನೆ. ಉಳಿದದ್ದು ನಿಮ್ಮ ವಿವೇಚನಕೆಗೆ ಬಿಟ್ಟಿದ್ದು ಎಂದು ಬರೆದಿದ್ದರು. ಇದಕ್ಕೆ ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com