ರಜಿನೀಕಾಂತ್ ಕ್ಷಮೆ ಕೇಳಿದರೂ ಸಿನಿಮಾ ಬಿಡುಗಡೆಗೆ ಅವಕಾಶ ನೀಡಲ್ಲ : ವಾಟಾಳ್‌ ನಾಗರಾಜ್‌

ಕಲಬುರಗಿ : ರಜನಿಕಾಂತ್ ನಟನೆಯ ಕಾಲ ಚಿತ್ರ ಬಿಡುಗಡೆಗೆ ವಿರೋಧ ಕುರಿತಂತೆ ವಾಟಾಳ್‌ ನಾಗರಾಜ್‌ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾಲ ಸಿನಿಮಾ ಬಿಡುಗಡೆಯಾಗಲ್ಲ. ಈಗಾಗಲೇ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಮಾತನಾಡಲಾಗಿದೆ. ಚಿತ್ರ ಬಿಡುಗಡೆ ಮಾಡದಂತೆ ಬೆಂಗಳೂರು ನಗರದಲ್ಲಿ ಇದೇ 7ನೇ ತಾರೀಕು ಬೃಹತ್ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.


ಕಾವೇರಿ ಕುರಿತು ರಜನಿಕಾಂತ್ ತಮಿಳುನಾಡು ಪರ ನಿಂತಿದ್ದಾರೆ. ಬಾಹುಬಲಿ ಚಿತ್ರದ ಸಂದರ್ಭದಲ್ಲಿ ಕಟ್ಟಪ್ಪ ಪಾತ್ರದಾರಿ ಕ್ಷಮೆ ಕೇಳಿದ್ದರು. ಹೀಗಾಗಿ ಬಾಹುಬಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡಲಾಗಿತ್ತು ಆದರೆ ರಜನಿಕಾಂತ್ ಕ್ಷಮೆ ಕೇಳಿದ್ರೂ ಚಿತ್ರ ಬಿಡುಗಡೆಗೆ ಅವಕಾಶ ನಿಡೋದಿಲ್ಲ ಎಂದಿದ್ದಾರೆ.

ರಜಿನೀಕಾಂತ್‌ ಕಾವೇರಿ ವಿಚಾರವಾಗಿ ತಮಿಳುನಾಡಿನ ಪರ ನಿಂತಿದ್ದರು ಎಂಬ ಕಾರಣಕ್ಕೆ ರಜಿನೀಕಾಂತ್ ಅವರ ಕಾಲ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ಕನ್ನಡಪರ ಹೋರಾಟಗಾರರು ನಿರ್ಧರಿಸಿದ್ದು, ಇಂದು ಪ್ರತಿಭಟನೆ ನಡೆಸುವುದಾಗಿ ವಾಟಾಳ್‌ ನಾಗರಾಜ್‌ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com