ಭಾರತದ ಆರ್ಥಿಕತೆ ಎಂಬ ಕಾರಿನ ಮೂರು ಚಕ್ರಗಳು ಪಂಕ್ಚರ್ ಆಗಿಬಿಟ್ಟಿವೆ : ಲೇವಡಿ ಮಾಡಿದ ಮಾಜಿ ವಿತ್ತಸಚಿವ

ಮುಂಬೈ : ಸದ್ಯ ದೇಶದ ಆರ್ಥಿಕ ಸ್ಥಿತಿ ಮೂರು ಚಕ್ರ ಪಂಕ್ಚರ್‌ ಆದ ಕಾರಿನಂತಾಗಿದೆ ಎಂದು ಮಾಜಿ ಹಣಕಾಸು ಸ ಚಿವ ಪಿ.ಚಿದಂಬರಂ ಲೇವಡಿ ಮಾಡಿದ್ದಾರೆ.

ಮಹಾರಾಷ್ಟ್ರದ ಥಾಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಏರುತ್ತಿರುವ ತೈಲಬೆಲೆ,  ನಿರುದ್ಯೋಗ ಸೇರಿದಂತೆ ಅನೇಕ  ವಿಷಯಗಳಲ್ಲಿ ಮೋದಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಖಾಸಗಿ ಹೂಡಿಕೆ, ಖಾಸಗಿ ಬಳಕೆ, ರಫ್ತು ಮತ್ತು ಸರ್ಕಾರಿ ವೆಚ್ಚಗಳು ಆರ್ಥಿಕತೆ ಪ್ರಗತಿಯ ಇಂಜಿನ್‌ ಇದ್ದಂತೆ. ಈ ನಾಲ್ಕು ಕಾರಿನ ಚಕ್ರಗಳಿದ್ದಂತೆ, ಒಂದು ಅಥವಾ ಎರಡು ಟೈಯರ್ ಪಂಕ್ಚರ್‌ ಆದರೆ ನಿಧಾನವಾಗುತ್ತದೆ. ಆದರೆ ನಮ್ಮಲ್ಲಿ ಕಾರಿನ ಮೂರು ಚಕ್ರಗಳು ಪಂಕ್ಚರ್ ಆಗಿವೆ. ಇದರಿಂದ ದೇಶದ ಅಭಿವೃದ್ಧಿಗೆ ಮಾರಕ ಎಂದಿದ್ದಾರೆ.

ಸರ್ಕಾರಿ ವೆಚ್ಚಕ್ಕೆ ಹಣ ಹೊಂದಿಸುವ ಸಲುವಾಗಿ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಮೇಲೆ ತೆರಿಗೆ ವಿಧಿಸುತ್ತಲೇ ಇದೆ. ತೆರಿಗೆ ಮೂಲಕ ಜನರಿಂದ ಹಣ ಸುಲಿಗೆ ಮಾಡುತ್ತಿದ್ದು, ಕೆಲ ಸಾರ್ವಜನಿಕ ಸೌಲಭ್ಯಗಳಿಂದ ಬರುವ ಹಣವನ್ನು ವೆಚ್ಚ ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com