16 ವರ್ಷ ತಾನೇ ಬೆಳೆಸಿದ ಮಗಳನ್ನು ಬಲಿ ಪಡೆದ ಅಪ್ಪ….ಅಷ್ಟಕ್ಕೂ ಆಗಿದ್ದೇನು ?

ಹುಬ್ಬಳ್ಳಿ : ಕೌಟುಂಬಕ ಕಲಹ ಹಿನ್ನೆಲೆಯಲ್ಲಿ ತಂದೆಯೊಬ್ಬ ತನ್ನ ಮಗಳನ್ನೇ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಹುಬ್ಬಳ್ಳಿಯ ಆಶೋಕ‌ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

ತಂದೆಯಿಂದಲೇ ಕೊಲೆಗೀಡಾದ ಬಾಲಕಿಯನ್ನು ನಿಖಿತಾ (16) ಎಂದು ಹೆಸರಿಸಲಾಗಿದೆ. ಇನ್ನು ಮಗಳನ್ನೇ ಕೊಂದ ಪಾಪಿ ತಂದೆಯನ್ನು  ಮೋಹನ್ ಕಿತ್ತೂರು ಎಂದು ಹೆಸರಿಸಲಾಗಿದೆ. ಗಲಾಟೆ ಬಿಡಿಸಲು ಬಂದ ಮತ್ತೊಬ್ಬ ಮಗಳು ಹಾಗೂ ಅಳಿಯನಿಗೂ ಗಾಯಗಳಾಗಿದ್ದು,
ಗಾಯಗೊಂಡ ಮತ್ತೊಬ್ಬ ಮಗಳು ಸುಜಾತಾಳನ್ನು ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿದೆ.
ಆಶೋಕ ನಗರ ಇನ್ಸ್‌ಪೆಕ್ಟರ್‌ ಜಗದೀಶ್ ಹಂಚಿನಾಳ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com