ಮೈತ್ರಿ ಸರ್ಕಾರ ಹಣ್ಣಾಗಿದೆ, ಯಾವಾಗ ಬಿದ್ದು ಹೋಗುತ್ತೋ ಗೊತ್ತಿಲ್ಲ, ಅದಕ್ಕೆ ನಿಫಾ ವೈರಸ್ ಅಂಟಿರಬೇಕು…!

ಹಾಸನ  : ಕೇಂದ್ರ ಸರ್ಕಾರದ ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾಗಿದೆ. ಆದರೆ ಈ ನಾಲ್ಕು ವರ್ಷದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ.

ಹಾಸನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಿದೇಶದಿಂದ ಕಪ್ಪು ಹಣ ತರುವ ಕೆಲಸ ಮಾಡುತ್ತಿದೆ. ಎಷ್ಟು ಹಣ ಬಂದಿದೆ ಎಂಬುದರ ಬಗ್ಗೆ ನನ್ನ ಬಳಿ ಅಂಕಿ ಅಂಶ ಇಲ್ಲ ಎಂದಿದ್ದಾರೆ.

ಇದೇ ವೇಳೆ ಮಹದಾಯಿ ವಿಚಾರ ಸಂಬಂಧ ಮಾತನಾಡಿದ  ಅವರು, ಮಹದಾಯಿ ವಿಚಾರವಾಗಿ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ. ಕಾಂಗ್ರೆಸ್‌ ಮೊದಲು ಸರಿಯಾಗಿ ನಡೆದುಕೊಂಡಿದ್ದರೆ, ಈ ವಿಚಾರ ಇಷ್ಟು ದೊಡ್ಡದಾಗುತ್ತಿರಲಿಲ್ಲ. ಎಂದಿದ್ದಾರೆ.

ಕಾಂಗ್ರೆಸ್‌ ಜೆಡಿಎಸ್‌ ಸರ್ಕಾರ ಈಗಾಗಲೆ ಹಣ್ಣಾಗಿದೆ. ಯಾವಾಗ ಬೇಕಾದರೂ ಬೀಳಬಹುದು. ಹಣ್ಣಿಗೆ ನಿಫಾ ಸೋಂಕು ತಗುಲಿದೆ ಎಂದು ಲೇವಡಿ ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com