ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ವಿಸ್ಫೋಟ : 25 ಜನರ ದುರ್ಮರಣ

ಗ್ವಾಟೆಮಾಲಾದಲ್ಲಿ ಭಾನುವಾರ ಜ್ವಾಲಾಮುಖಿಯೊಂದು ವಿಸ್ಫೋಟಗೊಂಡ ಪರಿಣಾಮ 25 ಜನರು ಸಾವಿಗೀಡಾಗಿದ್ದಾರೆ. 20 ಜನರಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿದ್ದು, ಸುಮಾರು 3000 ಜನರನ್ನು ಸುತ್ತಲಿನ ಗ್ರಾಮದಿಂದ ಸ್ಥಳಾಂತರಿಸಲಾಗಿದೆ. ಭಯಾನಕ ಜ್ವಾಲಾಮುಖಿಯಿಂದ ಅಪಾರ ಪ್ರಮಾಣದ ಬೂದಿ ಹಾಗೂ ದ್ರವರೂಪದ ಕಲ್ಲುಗಳು ಹೊರಚಿಮ್ಮಿದ್ದು, ನಗರದ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

Image result for guatemala volcano

ಇದೂ ಈ ವರ್ಷ ಗ್ವಾಟೆಮಾಲಾದಲ್ಲಿ ಸಂಭವಿಸಿದ ಎರಡನೇ ಅತಿ ದೊಡ್ಡ ಜ್ವಾಲಾಮುಖಿ ವಿಸ್ಫೋಟವಾಗಿದೆ. ಜ್ವಾಲಾಮುಖಿ ಉಗುಳಿದ ಬೆಂಕಿ ಮಿಶ್ರಿತ ಬೂದಿಯಿಂದಾಗಿ ಸುತ್ತ ಮುತ್ತಲಿನ ಗಿಡ ಮರಗಳು ಬೂದು ವರ್ಣಕ್ಕೆ ತಿರುಗಿದ್ದು, ರಸ್ತೆ, ವಾಹನಗಳ ಮೇಲೆ ಹರಡಿಕೊಂಡಿದೆ. ಜ್ವಾಲಾಮುಖಿಯಿಂದ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ರೈತರು ಅಲ್ಲಿಂದ ಘಟನಾ ಸ್ಥಳದಿಂದ ಪಲಾಯನ ಮಾಡಿದ್ದಾರೆ.

ಗ್ವಾಟೆಮಾಲಾ ನಗರದ ಪೋಲೀಸ್ ಸಿಬ್ಬಂದಿ, ಸೇನೆ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ನೂರಾರು ಕಾರ್ಯಕರ್ತರು ಜಂಟಿ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com