ಸಿದ್ದರಾಮಯ್ಯ ನೇತೃತ್ವ ಇಲ್ಲದಿದ್ದರೆ ಕಾಂಗ್ರೆಸ್‌ಗೆ 28 ಸ್ಥಾನನೂ ಬರ್ತಿರ್ತಿಲ್ಲ ಎಂದ ಬಿಜೆಪಿ ನಾಯಕಿ !!

ಚಾಮರಾಜನಗರ : ಕುಮಾರಸ್ವಾಮಿ ರೈತರ ಎಲ್ಲ ಸಾಲ ಮನ್ನಾ ಮಾಡ್ತಿನಿ ಅಂತ ಖುಷಿಯಿಂದ ಹೇಳಿದ್ರು. ವಯೋವೃದ್ದರಿಗೆ ಮಾಸಿಕ 6500ರೂ ನೀಡುವ ಘೋಷಣೆ ಮಾಡಿದ್ರು. ಸಾಲ ಮನ್ನಾ ಮಾಡ್ತಿವಿ ಅನ್ನೋದು ಹೇಳೊದಕ್ಕೆ ಮಾತ್ರ ಚನ್ನಾಗಿತ್ತು. ಇವತ್ತಿನ ಪರಿಸ್ಥಿತಿಯಲ್ಲಿ ತುಂಬ ಕಷ್ಟ ಇದೆ ಎಂದು ಬಿಜೆಪಿ ನಾಯಕಿ ತೇಜಸ್ವಿನಿ  ಗೌಡ ಹೇಳಿದ್ದಾರೆ.

ಪ್ರಾದೇಶಿಕ ಪಕ್ಷ ಸಂಪೂರ್ಣ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ. ಜೆಡಿಎಸ್‌ನವರು ರಾಜಕೀಯ ವಚನ ಭ್ರಷ್ಟರು. ಕಾಂಗ್ರೆಸ್ ಪಂಕ್ಚರ್ ಆಗಿರುವ ಗಾಡಿ. ಜೆಡಿಎಸ್ ನವರು ಪಂಕ್ಚರ್ ಆಗಿರೋ ಗಾಡಿ ಮೇಲೆ ರೇಸ್ ಗೆ ಹೋಗುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಸಿದ್ದರಾಮಯ್ಯ ನೇತ್ರತ್ವದಲ್ಲಿ ಕಾಂಗ್ರೆಸ್ 78 ಸ್ಥಾನ ಗೆದ್ದಿದೆ. ಸಿದ್ದರಾಮಯ್ಯ ನೇತೃತ್ವ ಇಲ್ಲದಿದ್ದರೆ ಕಾಂಗ್ರೆಸ್ ಗೆ 28 ಸ್ಥಾನ ಮಾತ್ರ ಬರುತ್ತಿತ್ತು ಎಂದು ಸಿದ್ದರಾಮಯ್ಯನನ್ನು ಕೊಂಡಾಡಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅವಕಾಶವಾದಿಗಳ ಪಿತಾಮಹ. ಶಾಸಕರ ಮೇಲೆ ಗೂಂಡಾಗಿರಿ ಮಾಡೋನು ರಾಜ್ಯಭಾರ ಮಾಡುವಂತಾಗಿದೆ. 70ಅಂಕಿ ದಾಟಿದವರು ಬಾಗಿಲು ಕಾಯುವಂತಾಗಿದೆ. ನಾವು ಇದಕ್ಕೆಲ್ಲ ಅಂಜೋದಿಲ್ಲ. ತಾಕತ್ತಿದ್ದರೆ ವಿಧಾನಸಭೆ ವಿಸರ್ಜನೆ ಮಾಡಿ ಬನ್ನಿ ಚುನಾವಣೆಗೆ ಹೋಗೋಣ ಬನ್ನಿ ಎಂದು ಸವಾಲು ಹಾಕಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com