ಜೆಡಿಎಸ್‌ ಬಿಟ್ಟು ನಮ್ಮ ಜೊತೆ ಬನ್ನಿ : ಕುಮಾರಸ್ವಾಮಿಗೇ ಆಫರ್‌ ನೀಡಿದ ಬಿಜೆಪಿ ಸಂಸದ..!!

ಬೆಳಗಾವಿ : ಸಿಎಂ ಎಚ್‌.ಡಿ ಕುಮಾರಸ್ವಾಮಿ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರಿಕೊಳ್ಳಲಿ ಇದೇ ಉತ್ತಮ  ಎಂದು ಬಿಜೆಪಿ ಸಂಸದ ಸುರೇಶ್ ಅಂಗಡಿ ಸಲಹೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು,  ಕುಮಾರಸ್ವಾಮಿ ದೈವಬಲದಿಂದ ಸಿಎಂ ಆಗಿದ್ದಾರೆ. ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್‌ನವರು ಜೆಡಿಎಸ್‌  ಪರ ನಿಂತ ಬೇಷರತ್‌ ಬೆಂಬಲ ನೀಡುವುದಾಗಿ ಹೇಳಿದ್ದರು. ಆದರೆ ಈಗ ಷರತ್ತುಗಳ ಮೇಲೆ ಷರತ್ತು ಹಾಕುತ್ತಿದ್ದಾರೆ. ಕುಮಾರಸ್ವಾಮಿ ಸುಮ್ಮನೆ ಜೆಡಿಎಸ್‌ ಬಿಟ್ಟು ಬಿಜೆಪಿಗೆ ಬರಲಿ ಎಂದು ಸಲಹೆ ನೀಡಿದ್ದಾರೆ.

ಬಿಜೆಪಿಗೆ ಜನ ಅತಿಹೆಚ್ಚು ಮತ ಹಾಕಿದ್ದರು. ಆದರೆ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಆದರೂ ಪರವಾಗಿಲ್ಲ ನಾವು ವಿಪಕ್ಷದಲ್ಲಿ ಕುಳಿತುಕೊಂಡೇ ಜನರ ಸೇವೆ ಮಾಡುತ್ತೇವೆ ಎಂದಿದ್ದಾರೆ.

ಸಾಲಮನ್ನಾ ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಆಗಿ ಮಾತನಾಡುತ್ತೇನೆ ಎಂದು ಕಾಲಹರಣ ಮಾಡುತ್ತಿದ್ದಾರೆ. ಅದರ ಬದಲು ಕುಮಾರಸ್ವಾಮಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿಕೊಳ್ಳಲಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com