Cricket : ಬಾಂಗ್ಲಾ ವಿರುದ್ಧ ಅಫಘಾನಿಸ್ತಾನಕ್ಕೆ 45 ರನ್ ಜಯ : ರಾಶಿದ್ ಖಾನ್ ಪಂದ್ಯಶ್ರೇಷ್ಟ

ಉತ್ತರಾಖಂಡ್ ರಾಜ್ಯದ ಡೆಹ್ರಾಡೂನ್ ನಲ್ಲಿರುವ ರಾಜೀವ್ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ಟಿ-20 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಅಫಘಾನಿಸ್ತಾನ 45 ರನ್ ಜಯ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಅಫಘಾನಿಸ್ತಾನ 1-0 ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಮೊತ್ತ ದಾಖಲಿಸಿತು. ಅಫಘಾನಿಸ್ತಾನ ಪರವಾಗಿ ಮೊಹಮ್ಮದ್ ಶೆಹಜಾದ್ 40 ಹಾಗೂ ಸಮೀವುಲ್ಲಾ ಶೆನ್ವಾರಿ 36 ರನ್ ಗಳಿಸಿದರು.

ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ 19 ಓವರುಗಳಲ್ಲಿ 122 ರನ್ ಸೇರಿಸಿ ಆಲೌಟ್ ಆಗಿ 45 ರನ್ ಸೋಲೊಪ್ಪಿಕೊಂಡಿತು. ಬಾಂಗ್ಲಾ ಪರವಾಗಿ ಲಿಟನ್ ದಾಸ್ 30 ಹಾಗೂ ಮೊಹಮ್ಮದುಲ್ಲಾಹ್ ರಿಯಾ 29 ರನ್ ಗಳಿಸಿದರು. ಅಫಘಾನಿಸ್ತಾನ ಪರವಾಗಿ ಪ್ರಮುಖ ಮೂರು ವಿಕೆಟ್ ಕಬಳಿಸಿದ ರಾಶಿದ್ ಖಾನ್ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

Leave a Reply

Your email address will not be published.

Social Media Auto Publish Powered By : XYZScripts.com