ಕಾಂಗ್ರೆಸ್‌ನಲ್ಲಿ ಹೈಕಮಾಂಡೇ ಎಲ್ಲ….ನಮ್ಮದೇನೂ ಇಲ್ಲ….. : ಬಾಯ್ಬಿಟ್ಟ ಖರ್ಗೆ……!!

ಬೆಂಗಳೂರು : ಐದು ವರ್ಷವೂ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಎಂಬ ಕರಾರು ವಿಷಯ ಸಂಬಂಧ  ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ  ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಯಾವ ವಿಚಾರವನ್ನೂ ಮಾತನಾಡಿಲ್ಲ. ಕೆ.ಸಿ.ವೇಣುಗೋಪಾಲ್ ಜೊತೆಯೂ ಚರ್ಚೆ ನಡೆಸಿಲ್ಲ. ಪಕ್ಷದ ಸಭೆಗೂ ನಾನು ಹೋಗಲಿಲ್ಲ. ಆದರೂ ನನ್ನ ಹೆಸರು ಸುಮ್ ಸುಮ್ನೆ ಮಧ್ಯೆ ಎಳೆದು ತಂದಿದ್ದಾರೆ. ಇದಕ್ಕೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ನನ್ನ ಹಾಗೂ ಹೈಕಮಾಂಡ್ ಮಧ್ಯೆ ಭಿನ್ನಾಬಿಪ್ರಾಯ ಇದೆ ಎಂದು ಬಿಂಬಿಸಲು ನನ್ನ ಹೆಸರನ್ನು ಮಧ್ಯೆ ತರಲಾಗಿದೆ. ಕುಮಾರಸ್ವಾಮಿಯವರು ಐದು ವರ್ಷ ಸಿಎಂ ಎಂದು ಹೈಕಮಾಂಡ್ ತೀರ್ಮಾನಿಸಿದರು. ಹೈಕಮಾಂಡ್ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಂಡಿದ್ದೇವೆ. ಇಲ್ಲಿ ನಮ್ಮದೇನೂ ಮಧ್ಯಸ್ಥಿಕೆ ಇಲ್ಲ.  ಹೈಕಮಾಂಡ್ ತೀರ್ಮಾನವನ್ನು ವೇಣುಗೋಪಾಲ್ ಪ್ರಕಟ ಮಾಡಿದ್ದಾರೆ. ಒಂದು ತಂಡವಾಗಿ ನಾವೆಲ್ಲ ಹೈಕಮಾಂಡ್ ತೀರ್ಮಾನ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.