‘ಕಾವೇರಿ’ಗೂ ‘ಕಾಲ’ನಿಗೂ ಎತ್ತಣಿಂದೆತ್ತ ಸಂಬಂಧ : ಪ್ರಕಾಶ್ ರೈ ‘ಜಸ್ಟ್ ಆಸ್ಕಿಂಗ್‌’…

ಬೆಂಗಳೂರು : ರಜಿನೀಕಾಂತ್ ಅಭಿನಯಕ ಕಾಳ ಸಿನಿಮಾ ಪ್ರದರ್ಶನಕ್ಕೆ ಕನ್ನಡಪರ ಸಂಘಟನೆಗಳು ನಿರ್ಬಂಧ ಹೇರಿರುವುದು ತಿಳಿದಿರುವ ವಿಚಾರ. ಆದರೆ ಕಾಲಾ ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸುತ್ತಿರುವ ಸಂಘಟನೆಗಳ ವಿರುದ್ದ ನಟ ಪ್ರಕಾಶ್‌ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದು, ಕಾಲಾ ಚಿತ್ರ ಏನು? ಕಾವೇರಿ ಗಲಾಟೆ ಏನು…ಇವೆರಡಕ್ಕೂ ಏನು ಸಂಬಂಧ? ಕಾಲಾ ಚಿತ್ರವನ್ನೇ ಏಕೆ ಗುರಿಯಾಗಿಸುತ್ತಿದ್ದಾರೆ?. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳು ರಾಜ್ಯದಲ್ಲಿ ಕೆಲವರಿಗೆ ಕಾನೂನನ್ನು ಉಲ್ಲಂಘಿಸಲು ಅಧಿಕಾರ ನೀಡುತ್ತಿದೆ. ಪದ್ಮಾವತ್ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಬಿಜೆಪಿ ಇದೆ ರೀತಿ ಮಾಡಿತ್ತು. ಈ ವಿಚಾರವನ್ನು ಜನಸಾಮಾನ್ಯರಿಗೆ ಬಿಡಿ, ಅವರೇ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ನಾವು ಕೇವಲ ನಟನೊಬ್ಬನ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಚಿತ್ರ ನಿರ್ಬಂಧಕ್ಕೆ ಯೋಚಿಸಬಾರದು. ಒಂದು ಚಿತ್ರ ನಿರ್ಮಾಣಕ್ಕೆ ನೂರಾರು ತಂತ್ರಜ್ಞರು, ಸಹಕಲಾವಿದರು, ಸಾವಿರಾರು ಕಾರ್ಮಿಕರು ಶ್ರಮವಹಿಸಿ ಸಿನಿಮಾ ನಿರ್ಮಾಣ ಮಾಡುತ್ತಾರೆ. ಅಲ್ಲದೇ ನಿರ್ಮಾಪಕರು ಚಿತ್ರಕ್ಕೆ ಕೋಟ್ಯಾಂತರ ರೂಪಾಯಿ ಹಣ ಹೂಡಿರುತ್ತಾರೆ. ಪ್ರದರ್ಶನಕ್ಕೆ ತಡೆ ನೀಡಿದಾಗ ನಿರ್ಮಾಪಕರ ಗತಿ ಏನು? ಹಂಚಿಕೆದಾರರು, ಥೀಯೇಟರ್ ಮಾಲೀಕರನ್ನು ನಂಬಿ ದುಡಿಯುವ ಅನೇಕ ಕಾರ್ಮಿಕರ ಗತಿ ಏನು? ನಾವು ಅದರ ಕುರಿತು ಯೋಚನೆ ಮಾಡಬೇಕು ಎಂದಿದ್ದಾರೆ.

ಈ ನನ್ನ ಹೇಳಿಕೆಯನ್ನು ಕೆಲವರು ವಿರೋಧಿಸಿ ನನ್ನನ್ನು ಕನ್ನಡ ದ್ರೋಹಿ ಎಂದು ಪಟ್ಟಕಟ್ಟಿದ್ರೂ ಆಶ್ಚರ್ಯಪಡಬೇಕಾಗಿಲ್ಲ. ಇತ್ತೀಚೆಗೆ ಪ್ರಶ್ನಿಸಿದ್ದಕ್ಕೆ ಕೆಲವರು ನನ್ನನ್ನು ದೇಶದ್ರೋಹಿ ಎಂದು ಪಟ್ಟಕಟ್ಟಿದ್ದರು. ಏನೇ ಆದರೂ ನಾನು ಏನು ಹೇಳಬೇಕೋ ಅದನ್ನೇ ಹೇಳಿಯೇ ತಿರುತ್ತೇನೆ. ಉಳಿದದ್ದು ನಿಮ್ಮ ವಿವೇಚನಕೆಗೆ ಬಿಟ್ಟಿದ್ದು ಎಂದು ಬರೆದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com