ನಾನು ಯಾವತ್ತೂ ಏಕಾಂಗಿಯಲ್ಲ, ಏಕಾಂಗಿಯಾಗಿರುವುದು ನಮ್ಮ ಜಾಯಮಾನವಲ್ಲ : ಡಿಕೆಶಿ

ಬೆಂಗಳೂರು : ನಾನು ಸಂಪುಟದಲ್ಲಿ ಇರಬೇಕೋ ಅಥವಾ ಪಕ್ಷದ ಸಾರಥ್ಯದಲ್ಲಿ ಇರಬೇಕೋ ಅನ್ನೋದನ್ನು ಪಕ್ಷ ತಿರ್ಮಾನ ಮಾಡಲಿದೆ.
ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ. ನಾನು ಪಕ್ಷದಲ್ಲಿ ಯಾವತ್ತೂ ಏಕಾಂಗಿಯಾಗಿಲ್ಲ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಏಕಾಂಗಿಯಾಗಿರುವುದು ನನ್ನ ಜಾಯಮಾನವಲ್ಲ. ಎಲೆಕ್ಷನ್ ಮುಗಿದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೋಗಿದ್ದೆ. ಅದಕ್ಕೆ ನಾನು ಕಾಣ್ತಿಲ್ಲ ಅನ್ನೋದು ಸರಿಯಲ್ಲ. ದೇವಸ್ಥಾನಗಳಿಗೆ ಹೋಗಲೇಬಾರದಾ…? ಕೆಪಿಸಿಸಿ ಸಾರಥ್ಯ ಕೊಟ್ರೆ ನೋಡೋಣ. ಹೈಕಮಾಂಡ್‌ ಕೈಗೊಳ್ಳೋ ತೀರ್ಮಾನ ಅಂತಿಮ ಎಂದಿದ್ದಾರೆ.

ಎಸ್ ಆರ್ ಪಾಟೀಲ ಯಾಕೆ ರಾಜೀನಾಮೆ ಕೊಟ್ರು ಅಂತ ಗೊತ್ತಿಲ್ಲ.  ಅವರು ಪ್ರಮುಖ ನಾಯಕರು. ದಕ್ಷಿಣ ಕರ್ನಾಟಕದ ಭಾಗದಲ್ಲಿ ನಮ್ಮವರು ( ಒಕ್ಕಲಿಗರು ) ಇದ್ದಾರೆ. ಅಲ್ಲಿ ವೀರಶೈವ ಸಮುದಾಯ ಇದೆ. ಚುನಾವಣೆಯಲ್ಲಿ ನಮಗೆ ಓಟ್ ಹಾಕಿದ ಜನ ಸಹ ರಾಜ್ಯದಲ್ಲಿ ಇದ್ದಾರೆ. ಎಲ್ಲರ ಬಗ್ಗೆ ಹೈಕಮಾಂಡ್ ಯೋಚನೆ ಮಾಡಲಿದೆ. ವೀರಶೈವರನ್ನು ಕಡೆಗಣಿಸಲು ಸಾಧ್ಯವಿಲ್ಲ. ಸಚಿವ ಸಂಪುಟ ರಚನೆ ವೇಳೆ ವೀರಶೈವ ರನ್ನು ನೋಡಬೇಕಾಗುತ್ತದೆ ಎಂದು ಎಸ್‌.ಆರ್‌ ಪಾಟೀಲ್‌ ಪರ ಬ್ಯಾಟಿಂಗ್ ಮಾಡಿದ್ದಾರೆ.

One thought on “ನಾನು ಯಾವತ್ತೂ ಏಕಾಂಗಿಯಲ್ಲ, ಏಕಾಂಗಿಯಾಗಿರುವುದು ನಮ್ಮ ಜಾಯಮಾನವಲ್ಲ : ಡಿಕೆಶಿ

Leave a Reply

Your email address will not be published.

Social Media Auto Publish Powered By : XYZScripts.com