SHOCKING : ಕಾಂಗ್ರೆಸ್‌ನ ಟ್ರಬಲ್‌ ಶೂಟರ್‌ ಡಿಕೆಶಿಯಿಂದಲೇ ಶುರುವಾಯ್ತು ಟ್ರಬಲ್‌…!

ಬೆಂಗಳೂರು : ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಎಲ್ಲಾ ತೊಂದರೆಗಳನ್ನು ಎದುರಿಸಿ  ಇನ್ನೇನು ಸಂಪುಟ ರಚನೆ ಮಾಡಬೇಕು ಎನ್ನುವ ಹೊತ್ತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಕಾಂಗ್ರೆಸ್‌ನ ಟ್ರಬಲ್‌ ಶೂಟರ್‌ ಡಿಕೆಶಿಯಿಂದಲೇ ಪಕ್ಷಕ್ಕೆ ಟ್ರಬಲ್ ಉಂಟಾಗಿದ್ದು, ಸಚಿವ ಸಂಪುಟ ವಿಸ್ತರಣೆ ಮಾಡಿದಾಗ ನನಗೆ ಮುಜರಾಯಿ ಖಾತೆ ನೀಡಿ, ದೇವಸ್ಥಾನ ಸುತ್ತಿಕೊಂಡು ಕಾಲಕಳೆಯುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಮೈತ್ರಿ ಸರ್ಕಾರದಲ್ಲಿ ತಮಗೆ ಇಂಧನ ಖಾತೆ ನೀಡಬೇಕು ಎಂದು ಡಿಕೆಶಿ ಪಟ್ಟು ಹಿಡಿದಿದ್ದರು. ಆದರೆ ಆ ಖಾತೆ ಜೆಡಿಎಸ್‌ ಪಾಲಾಗಿತ್ತು. ಇದಾದ ಬಳಿಕ ನಾವು ಜೆಡಿಎಸ್‌ಗೆ ನಾವು ಬೇಷರತ್‌ ಬೆಂಬಲ ನೀಡುವುದಾಗಿ ಹೇಳಿದ್ದೆವು. ಆದ್ದರಿಂದ ಕುಮಾರಸ್ವಾಮಿಯೇ ಐದು ವರ್ಷ ಸಿಎಂ ಆಗಲಿ. ನಿಮಗೆ ಬೇಕಾದ ಖಾತೆಗಳನ್ನು ನೀವಿಟ್ಟುಕೊಳ್ಳಿ ಎಂದಿದ್ದೇವೆ, ಆದ್ದರಿಂದ ಖಾತೆ ಹಂಚಿಕೆ ವಿಚಾರವಾಗಿ ಯಾರೂ ತಕರಾರು ಮಾಡಬಾರದು ಎಂದು ಹೈಕಮಾಂಡ್‌ ಸೂಚಿಸಿರುವುದಾಗಿ ತಿಳಿದುಬಂದಿದೆ.

ಆದರೆ ಇದ್ಯಾವುದೂ ತನಗೆ ತಿಳಿದಿಲ್ಲ. ನೀವು ಕೈಗೊಂಡ ತೀರ್ಮಾನದಿಂದ ನಾವು ನಮಗಿಂತ ಚಿಕ್ಕವರ ಕೆಳಗೆ ಸಣ್ಣ ಪುಟ್ಟ ಖಾತೆ ಇಟ್ಟುಕೊಂಡು ಕೆಲಸ ಮಾಡಬೇಕಾಗುತ್ತದೆ. ಇದರಿಂದ ಮಜುಗರ ಉಂಟಾಗುತ್ತದೆ. ಸತತವಾಗಿ ಏಳು ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಬಂದ ನನಗೆ ಪ್ರಮುಖ ಖಾತೆ ಸಿಗದಿದ್ದರೆ ಸಹಜವಾಗಿ ಸಾರ್ವಜನಿಕ ವಲಯಗಳಲ್ಲಿ ನನ್ನ ಶಕ್ತಿಯೂ ಕಡಿಮೆಯಾಗುತ್ತದೆ. ಮತ್ತೊಂದೆಡೆ ಕೇಂದ್ರ ಸರ್ಕಾರವೂ ಮೈತ್ರಿ ಸರ್ಕಾರ ಬಿದ್ದುಹೋಗುವುದನ್ನೇ ಕಾಯುತ್ತಿದೆ. ನನಗೆ ಪ್ರಮುಖ ಖಾತೆಗಳನ್ನು ನೀಡುವ ಬದಲು ಮುಜುರಾಯಿ ಖಾತೆಯನ್ನು ಕೊಡಿಸಿಬಿಡಿ. ಸುಮ್ಮನೆ ದೇವಾಲಯಗಳನ್ನಾದರೂ ಸುತ್ತುತ್ತಾ ಕಾಲ ಕಳೆಯುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Leave a Reply

Your email address will not be published.

Social Media Auto Publish Powered By : XYZScripts.com