WATCH : ಹಮ್‌ ಭೀ ಫಿಟ್‌ ಹೇ ಅಂದ್ರು ಕಿಚ್ಚ : ಕ್ರಿಕೆಟಿಗನ ಸವಾಲಿಗೆ ಸುದೀಪ್‌ ಜವಾಬು….

ಬೆಂಗಳೂರು : ಹಮ್ ತೋ ಫಿಟ್‌ ಹೇ ಇಂಡಿಯಾ ಹೆಸರಿನಲ್ಲಿ ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್‌ ಹೊಸ ಅಭಿಯಾನ ಆರಂಭಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಈ ಅಭಿಯಾನಕ್ಕೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಹ ಸಿಕ್ಕಿದೆ.

ಈಗ ಕಿಚ್ಚ ಸುದೀಪ್ ಅಭಿಮಾನಿಯಾಗಿರುವ ಕರ್ನಾಟಕ ರಣಜಿ ತಂಡದ ಕ್ಯಾಪ್ಟನ್‌ ವಿನಯ್ ಕುಮಾರ್‌ ಸುದೀಪ್‌ಗೆ ಫಿಟ್‌ನೆಸ್ ಚಾಲೆಂಜ್‌ ಹಾಕಿದ್ದಾರೆ. ವಿನಯ್ ಸವಾಲನ್ನು ಕಿಚ್ಚ ಸುದೀಪ್‌ ಸ್ವೀಕರಿಸಿದ್ದು, ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೋವೊಂದನ್ನು ಅಪ್‌ಲೋಡ್‌ ಮಾಡಿದ್ದಾರೆ.

ವಿನಯ್‌..ನಾನು ನಿಮ್ಮ ಚಾಲೆಂಜನ್ನು ಅಕ್ಸೆಪ್ಟ್‌ ಮಾಡಿಕೊಂಡಿದ್ದು, ಇಂದು ಕೋರ್‌  ಎಕ್ಸಸೈಸ್ ಮಾಡುತ್ತಿದ್ದೇನೆ, ಅಲ್ಲದೆ ಸೋಹೆಲ್‌ ಖಾನ್‌, ರಿತೇಶ್‌ ದೇಶ್‌ಮುಖ್‌, ಪ್ರಿಯಾ, ಯಶ್‌ ಹಾಗೂ ಶಿವಣ್ಣ ಅವರಿಗೂ ಫಿಟ್‌ನೆಸ್‌ ಚಾಲೆಂಜ್ ಹಾಕಿದ್ದಾರೆ.

ಇದಕ್ಕೆ ವಿನಯ್‌ ಕುಮಾರ್ ಪ್ರತಿಕ್ರಿಯಿಸಿದ್ದು, ಸೂಪರ್‌ ಬ್ರದರ್‌, ನನ್ನ ಚಾಲೆಂಜ್ ಅಕ್ಸೆಪ್ಟ್‌ ಮಾಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.

 

Leave a Reply

Your email address will not be published.