ಥಾಯ್ಲೆಂಡ್ : 80 ಪ್ಲಾಸ್ಟಿಕ್ ಬ್ಯಾಗ್ ನುಂಗಿ ಅರಗಿಸಿಕೊಳ್ಳಲಾಗದೆ ಮೃತಪಟ್ಟ ತಿಮಿಂಗಲ..!

ತಿಮಿಂಗಿಲವೊಂದು 80 ಪ್ಲಾಸ್ಟಿಕ್ ಚೀಲಗಳನ್ನು ತಿಂದು ಅರಗಿಸಿಕೊಳ್ಳಲಾಗದೆ ಮೃತಪಟ್ಟಿರುವ ಘಟನೆ ದಕ್ಷಿಣ ಥಾಯ್ಲೆಂಡಿನಲ್ಲಿ ನಡೆದಿದೆ. ಮಲೇಷ್ಯಾ ಗಡಿಭಾಗದಲ್ಲಿರುವ ಕಾಲುವೆ ಒಂದರಲ್ಲಿ ಈ ತಿಮಿಂಗಲ ಪ್ಲಾಸ್ಟಿಕ್ ನುಂಗಿ ಜೀರ್ಣಿಸಿಕೊಳ್ಳಲಾಗದೆ ಅರೆಜೀವಾವಸ್ಥೆಯಲ್ಲಿ ಒದ್ದಾಡುತ್ತಿತ್ತು. ಇದನ್ನು ಕಂಡ ಕೆಲವು ಸ್ಥಳಿಯ ಜನರೆಲ್ಲ ಸೇರಿಕೊಂಡು ತಿಮಿಂಗಲವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

Image result for 80 plastic bags whale dies

ಪಶುವೈದ್ಯರ ತಂಡವೊಂದು ಕೂಡಲೇ ರಕ್ಷಣೆಯ ಕಾರ್ಯದಲ್ಲಿ ತೊಡಗಿಕೊಂಡಿತಾದರೂ, ಚಿಕಿತ್ಸೆ ವಿಫಲವಾಗಿ ಗಂಡು ತಿಮಿಂಗಲ ಮೃತಪಟ್ಟಿದೆ. ಒಟ್ಟು 8 ಕೆಜಿ ಭಾರದ ಪ್ಲಾಸ್ಟಿಕ್ ಪದಾರ್ಥಗಳನ್ನು ಅದು ನುಂಗಿತ್ತು. ಮೃತ ತಿಮಿಂಗಲದ ದೇಹದಿಂದ 80 ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಹೊರತೆಗೆಯಲಾಗಿದೆ.

Image result for 80 plastic bags whale dies

ಅತಿ ಹೆಚ್ಚು ಪ್ಲಾಸ್ಟಿಕ್ ಬಳಸುವ ದೇಶಗಳಲ್ಲಿ ಥಾಯ್ಲೆಂಡ್ ಕೂಡ ಒಂದಾಗಿದೆ. ಪ್ಲಾಸ್ಟಿಕ್ ಪದಾರ್ಥಗಳನ್ನು ನುಂಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ತಿಮಿಂಗಲ, ಡಾಲ್ಫಿನ್ ಹಾಗೂ ಕಡಲಾಮೆಗಳು ಸೇರಿದಂತೆ ವರ್ಷಕ್ಕೆ ಸರಾಸರಿ 300 ಸಾಗರ ಜೀವಿಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com