ತರಗತಿಯಲ್ಲಿ ವಿದ್ಯಾರ್ಥಿಯತ್ತ ಸ್ಕೇಲ್ ಎಸೆದ ಶಿಕ್ಷಕ : ಎಡಗಣ್ಣಿನ ದೃಷ್ಟಿ ಕಳೆದುಕೊಂಡ ಬಾಲಕ

ಚಾಮರಾಜನಗರ : ತರಗತಿಯಲ್ಲಿ ವಿದ್ಯಾರ್ಥಿಯತ್ತ ಶಿಕ್ಷಕನೊಬ್ಬ ಸ್ಕೇಲ್ ಎಸೆದ ಪರಿಣಾಮ ವಿದ್ಯಾರ್ಥಿಯ ಕಣ್ಣಿಗೆ ಪೆಟ್ಟು ಬಿದ್ದು ಎಡಗಣ್ಣಿನ ದೃಷ್ಟಿ ಕಳೆದುಕೊಂಡಿರುವ ಘಟನೆ ಚಾಮರಾಜನಗರದ ಸಿ.ಆರ್ ಬಾಲರಪಟ್ಟಣದಲ್ಲಿ ನಡೆದಿದೆ. ವಿದ್ಯಾರ್ಥಿಯ ಪೋಷಕರು ಶಿಕ್ಷಕನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಕಳೆದ ಆರು ತಿಂಗಳಹಿಂದೆ ನಡೆದಿದ್ದ ಈ ಘಟನೆಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿ ಗಿರಿಮಲ್ಲೇಶ್ ದೃಷ್ಟಿ ಕಳೆದುಕೊಂಡಿದ್ದಾನೆ. ಗಲಾಟೆ ಮಾಡುತ್ತಿದ್ದ ವಿದ್ಯಾರ್ಥಿಗಳ ಗುಂಪಿನ ಮೇಲೆ ಶಿಕ್ಷಕ ಸ್ಕೇಲ್ ಎಸೆದಾಗ ಕಣ್ಣಿಗೆ ಸ್ಕೇಲ್ ತಗುಲಿ ಪೆಟ್ಟಾಗಿತ್ತು. ಶಿಕ್ಷಕ ಯುಸುಫ್ ವಿರುದ್ಧ ಪೋಷಕರು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com