ವಾರೆ ನೋಟಾ ಬಿರೈತೆ, ಲೋಕಸಭೆ ಎಲೆಕ್ಸಗನ್ ಗೆ ರೆಡಿಯಾಗೈತಿ ; ಮೋದಿ ಗೆ ಗುದ್ದಲು ಸಿದ್ದು ಎದ್ದು ನಿಂತರು…..

ವಾರೆ ನೋಟಾ ಬಿರೈತೆ …ಕಾಲು ಕೆದರಿ ನಿಂತೈತಿ..ಲೋಕಸಭೆ ಎಲೆಕ್ಸಗನ್ ಗೆ ರೆಡಿಯಾಗೈತಿ ; ಮೋದಿ ಗೆ ಗುದ್ದಲು ಸಿದ್ದು ಎದ್ದು ನಿಂತರು…..

ಅವನ್ಯಾರಿ ನನ್ನ ಲೆಕ್ಕ ಕೇಳೋಕೆ ? ನಾನು ಲೆಕ್ಕ ಕೊಡಬೇಕಾಗಿದ್ದು ಕರ್ನಾಟಕದ ಜನತೆಗೆ, ಕರ್ನಾಟಕ ವಿಧಾನಸಭೆ ಗೆ ..ಅಮಿತ್ ಶಾ ಯಾರ್ರಿ ಲೆಕ್ಕಾ ಕೇಳೋಕೆ ?

ಅಚ್ಛೇ ದಿನ್ ಆಯೇಗಾ … ಕಬ್ ಆಯೇಗಾ ಮಾಲೂಮ್ ನಹಿ.. ಕಿಸ್ ಕೋ ಆಯೆಗಾ ಮಾಲೂಮ್ ನಹಿ..ಅವನ್ಯಾರೋ ಯೋಗಿ ಅಂತೆ ಕರ್ನಾಟಕ ರಾಜ್ಯದ ಕಾನೂನು ಬಗ್ಗೆ ಭಾಷಣ ಮಾಡೋಕೆ ಇಲ್ಲಿಗೆ ಬಂದಿದ್ದ ಅವನ ರಾಜ್ಯ ಜಂಗಲ್ ರಾಜ್ಯವಾಗಿದೆ..

ಈ ಮೂರು ವಿಷಯಗಳೇ ಕರ್ನಾಟಕದ ೨೦೧೮ ರ ವಿಧಾನಸಭೆ ಚುನಾವಣೆಯ ಪೂರ್ವದ ಕೆಲವು ದಿನಗಳ ಹಿಂದೆ ಹೆಚ್ಚು ಪ್ರಚಲಿತದಲ್ಲಿದ್ದವು.. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ, ಯು.ಪಿ. ಸಿಎಮ್ ಯೋಗಿ ಆದಿತ್ಯನಾಥ ಕರ್ನಾಟಕದಲ್ಲಿ ಬಂದು ಈ ವಿಷಯಗಳನ್ನು ಪ್ರಸ್ತಾಪಿಸಿ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡು ಹೋಗಿದ್ದರು.

ಅವರು ಮೂವರಿಗೂ ತಿರುಗೇಟು ನೀಡಿದ್ದು, ಅಂಕಿ ಅಂಶದ ಸಮೇತ ಟಾಂಗ್  ನೀಡಿದ್ದು ಮಾತ್ರ ಒನ್‌ ಅಂಡ್ ಒನ್ಲಿ ಸಿದ್ದರಾಮಯ್ಯ.

ಹೌದು ಬಹುಶಃ ದೇಶದ ಯಾವುದೇ ಬಿಜೆಪಿ ಯೇತರ ಮುಖ್ಯಮಂತ್ರಿಗಳು ಈ ಪರಿ ಮೋದಿ, ಅಮೀತ್ ಶಾ, ಯೋಗಿ ವಿರುದ್ಧ ತಿರುಗಿ ಬಿದ್ದಿರಲಿಲ್ಲ. ಆ ಮೂಲಕ ಈ ಚುನಾವಣೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ರಾಷ್ಟ್ರ ರಾಜಕಾರಣದ ಹೊಸ್ತಿಲಿಗೆ ತಂದು ನಿಲ್ಲಿಸಿದೆ. ದೇಶದಲ್ಲಿನ ಕೆಲವು ಬಿಜಿಪಿಯೇತರ ಸರ್ಕಾರ ಇರುವ ಮುಖ್ಯಮಂತ್ರಿಗಳ ಸುತ್ತ ಒಮ್ಮೆ ಕಣ್ಣು ಹಾಯಿಸಿದರೇ ಮೋದಿಗೆ ಮೋದಿ ಶೈಲಿಯಲ್ಲಿಯೇ ತಿರುಗೇಟು ನೀಡುವ, ಅಮಿತ್ ಶಾ ನ ತಂತ್ರಗಾರಿಕೆಯ ರಹಸ್ಯ ಬಿಚ್ಚಿಡುವ , ಯೋಗಿ ಆದಿತ್ಯನಾಥನ ಕೋಮುವಾದಿ ಹಿಂದೂತ್ವಕ್ಕೆ ಸೌಮ್ಯವಾದಿ ಹಿಂದೂತ್ವದ ಮೂಲಕ ಟಾಂಗ್ ನೀಡಿದ ಒಬ್ಬೇ ಮುಖ್ಯಮಂತ್ರಿ, ನಾಯಕ ಕಾಣಿಸುವದಿಲ್ಲ..ಆದರೆ ಈ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ವಾಗ್ಝರಿ ನೋಡಿದರೆ ಅವರೊಬ್ಬ ಪಕ್ಕ ರಾಷ್ಟ್ರೀಯ ಮುತ್ಸದ್ಧಿ ಯಾಗುವದರಲ್ಲಿ ಸಂಶಯವಿಲ್ಲ.

ಚುನಾವಣಾ ಪೂರ್ವದಲ್ಲಿ ರಾಜ್ಯಕ್ಕೆ ಬಂದಿದ್ದ‌ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರವನ್ನು ಕಟು ಟೀಕೆಗಳಿಂದ ನಿಂದಿಸಿದರು. ಸ್ವಾತಂತ್ರ್ಯದ ನಂತರ ದೇಶದಲ್ಲಿಯೇ ಭೃಷ್ಟಾಚಾರದಲ್ಲಿ ಕರ್ನಾಟಕ ಸರ್ಕಾರ ನಂ.೧ ಸ್ಥಾನದಲ್ಲಿದೆ ಎಂದರು.ಅಲ್ಲದೇ ಕೇಂದ್ರ ಸರ್ಕಾರ ಇದೂವರೆಗೂ ಕರ್ನಾಟಕ ಸರ್ಕಾರಕ್ಕೆ ೧ ಲಕ್ಷ ೩೯ ಸಾವಿರ ಕೋಟಿ ಅನುದಾನ ನೀಡಿದೆ ಅದರ ಲೆಕ್ಕ ಕೊಡಿ ಎಂದರು. ಅಷ್ಟಕ್ಕೆ ಕುಣಿದ ಕುಪ್ಪಳಿಸಿಸ ಮೋದಿಯ ಭಕ್ತರು ವಿಜಯೋತ್ಸವ ಆಚರಿಸಿದರು.ಇದಕ್ಕೂ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ , ಏ ಅಮಿತ್ ಶಾ ನೀವ್ಯಾರ್ರಿ ಲೆಕ್ಕ ಕೇಳೋಕೆ ಎಂದು ಜಾಡಿಸಿ ಬಿಟ್ಟರು.ಖುದ್ದು ಅಮಿತ್ ಶಾ,ಮೋದಿ ಟಿಂ ಅರೆರೆ ಇದೇನ್ರಿ ಎಂದು ಕಂಗಾಲಾಗಿ ಬಿಟ್ಟರು. ಸಿದ್ದು ಇದನ್ನ ಅಷ್ಟಕ್ಕೆ ಬಿಡದೇ , ಈ ಅಮಿತ್ ಶಾ ಗೆ ಲೋಕಸಭೆ, ವಿಧಾನ ಸಭೆ, ತೆರಿಗೆ ವ್ಯವಸ್ಥೆ ಬಗ್ಗೆ ಏನೂ ಗೊತ್ತಿಲ್ಲ.ಕೇಂದ್ರ ಸರ್ಕಾರ  ಬಿಡುಗಡೆ ಮಾಡಿರೋ ಹಣ ನಮ್ಮ‌ ತೆರಿಗೆ ಹಣ, ಅದು ನಮ್ಮ ಹಕ್ಕು . ರಾಜ್ಯ ಸರ್ಕಾರಗಳ ತೆರಿಗೆ ಹಣದಲ್ಲಿ ನಮ್ಮ‌ ಪಾಲನ್ನು ಕೊಡಬೇಕು. ಅದಕ್ಕಾಗಿಯೇ ಹಣಕಾಸು ಆಯೋಗವನ್ನು ರಚಿಸಲಾಗಿದೆ. ಈ ಕನಿಷ್ಠ ಜ್ಛಾನವೂ ಈ ಅಮಿತ್ ಶಾ ನಿಗೆ ಇಲ್ಲ ಎಂದು ಸಿದ್ದು ತೀವಿದಿದ್ದರು.ಅಷ್ಟೇ ಅಲ್ಲ , ಕರ್ನಾಟಕ ಸರ್ಕಾರ ತುಂಬಿದ್ದ ತೆರಿಗೆ ಹಣ 1 ಲಕ್ಷ 2 ಸಾವಿರ ಕೋಟಿ ರೂಪಾಯಿ. ಇದರಲ್ಲಿ ನಮಗೆ ಕೊಟ್ಟಿದ್ದು 92,340 ಕೋಟಿ ರೂಪಾಯಿ.. ಬಾಕಿ 10,600 ಕೋಟಿ ರೂಪಾಯಿ ಎಲ್ಲಿ ಅಮಿತ್ ಶಾ ? ಎಂದು ಪಕ್ಕಾ ಲೆಕ್ಕ ಕೇಳಿ ಬಿಟ್ಟಾಗ ಅಮಿತ್ ಶಾ ಉಸ್ಸ ಎಂದು ಕೂದಲು ಇಲ್ಲದ ತಲೆ ಕೆದರಿಕೊಳ್ಳ ತೊಡಗಿದರು. ವಿಜಯೋತ್ಸವದಲ್ಲಿದ  ಮೋದಿ ಭಕ್ತರು ಈ ಅನುದಾನ,ಹಣಕಾಸು ಅಂದ್ರೆ ಹಿಂದೂತ್ವದ ಉಪ ಜಾತಿಗಳಾ ? ಅಂತ ಚಿಂತಿಸ ತೊಡಗಿದರು.

ಬರೀ ಇಷ್ಟೇ ಆಗಿದ್ದರೆ ಅಮಿತ್ ಶಾ ಕೂಡ ಬಹಳಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ..ಆದರೆ ಸಿದ್ದರಾಮಯ್ಯ ಹೋದ ಸಮಾವೇಶಗಳಲ್ಲೆಲ್ಲ ಈ ಬಿಜೆಪಿ ಯ ಚಾಣಾಕಿ ಯನ್ನೇ ಟಾರ್ಗೇಟ್ ಮಾಡ್ತೀದ್ರು.. ಅದ್ಯಾರೋ ಶಾ ಅಂತೆ ಕರ್ನಾಟಕಕ್ಕೆ ಬಂದು ಕರ್ನಾಟಕವನ್ನು ನಂ.ಒನ್ ಭೃಷ್ಟಾಚಾರದ ಸರ್ಕಾರ ಅಂತಾನೆ ಆದರೆ ಪಕ್ಕದಲ್ಲಿಯೇ ಜೈಲಿಗೆ ಹೋದ ಗಿರಾಕಿಗಳನ್ನು ಇಟ್ಕೊಂಡ ಮಾತಾಡ್ತಾನೆ. ಸ್ವತಃ ಅಮಿತ್ ಶಾ ಗುಜರಾತ್ ನ ಗೃಹ ಮಂತ್ರಿ ಇದ್ದಾಗ ಜೈಲಿಗೆ ಹೋಗಿ ನಮಗೆ ಭೃಷ್ಟಾಚಾರದ ಬಗ್ಗೆ ಪಾಠ ಮಾಡ್ತಾನೆ ಅಂತ ತೀವಿದಿದ್ದರು. ಅವತ್ತಿಂದ ಅಮಿತ್ ಶಾ‌ ಯಾವತ್ತೂ ಸಿದ್ದರಾಮಯ್ಯನ ಬಗ್ಗೆ ತುಟಿ ಪಿಟಕ್ ಅನ್ಲಿಲ್ಲ.

ಪ್ರಧಾನಿ ಮೋದಿಯನ್ನು ಸಿದ್ದು ಬಿಟ್ಟಿಲ್ಲ. ಬೆಂಗಳೂರಿಗೆ ಬಂದ ಪ್ರಧಾನಿ ಮೋದಿ, ಸಿದ್ದರಾಮಯ್ಯನವರ ಸರ್ಕಾರ ಸೀದಾ ರೂಪಯ್ಯ ಸರ್ಕಾರ ಎಂದು ಅಣಕಿಸಿದರು. ಇದಕ್ಕೂ ತಿರುಗೇಟು ನೀಡಿದ ಸಿದ್ದರಾಮಯ್ಯ, ನಮ್ಮದು ೧೦% ಸರ್ಕಾರ ಅಂತಿರಲ್ಲ ಅದಕ್ಕೆ ದಾಖಲಾತಿ ಕೊಡಿ ? ಪಕ್ಕದಲ್ಲಿಯೇ ಭೃಷ್ಟಾಚಾರದ ಲ್ಲಿ ಸಿಲುಕಿ ಜೈಲಿಗೆ ಹೋದವರನ್ನು ಇಟ್ಟುಕೊಂಡು ಈ ಮಾತಾಡೋಕೆ ನಾಚಿಕೆಯಾಗಲ್ವಾ ? ಎಂದು ಪ್ರಶ್ನಿಸಿದರು. ಮಧ್ಯಪ್ರದೇಶದಲ್ಲಿ ನಿಮ್ಮ ಮುಖ್ಯಮಂತ್ರಿ, ಅವರ ರಕ್ತ ಸಂಬಂಧಿಕರು ಪನಾಮಾ ಪೇಪರ್ಸ್ ಹಗರಣದಲ್ಲಿ ಸಿಲುಕಿ ಕೊಂಡಿದ್ದಾರೆ, ರಾಜಸ್ಥಾನದಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ ಭೃಷ್ಟಾಚಾರದ ಆರೋಪದಲ್ಲಿದ್ದಾರೆ ಅದರ ಬಗ್ಗೆನೂ ಮಾತಾಡ್ರಿ ಎಂದು ಕಾಲೆಳೆದು ಬಿಟ್ಟರು‌.

ಇನ್ನೂ ಯು.ಪಿ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನಿಗೆ, ಹಿಂದುತ್ವದ ಪಾಠ ಹೇಳಿದರು. ಅವನ್ಯಾರೋ ಯೋಗಿಯಂತೆ ನನಗೆ ಹಿಂದೂತ್ವದ ಪಾಠ ಹೇಳ್ತೀದಾನೆ. ಅವನ ರಾಜ್ಯ ಜಂಗಲ್ ರಾಜ್ಯವಾಗಿದೆ. ಕಾನೂನು ಸುವ್ಯವಸ್ಥೆ ಹದ ಗೆಟ್ಟಿದೆ ಇಲ್ಲಿ ಬಂದು ರಾಮನ,ಹನುಮನ ಜಯಂತಿ ಮಾಡ್ತಿಲ್ಲ ಅಂತಾನೆ. ಆದರೆ ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಸೇರಿದಂತೆ ಹಲವು ಮಹನೀಯರ ಜಯಂತಿ ಆಚರಿಸುತ್ತಿದ್ದೇನೆ. ಮಿ.ಯೋಗಿ ನಾನು ಕರ್ನಾಟಕದ ಮಣ್ಣಿನ ಮಗ ಯಾರ ಜಯಂತಿ ಆಚರಿಸಬೇಕು ಎನ್ನುವದನ್ನು ನಿನ್ನಿಂದ ಪಾಠ ಕಲಿಬೇಕಿಲ್ಲ ಎಂದು ಅಬ್ಬರಿಸಿಬಿಟ್ಟರು..ಹೋಗು ನಿನ್ನ‌ ರಾಜ್ಯದಲ್ಲಿ ಅಪೌಷ್ಠಿಕತೆಯಿಂದ ಮಕ್ಕಳು ಸಾಯ್ತಿದಾರೆ ಅವರ ಬಗ್ಗೆ ಯೋಚನೆ ಮಾಡು ಎಂದರು.ಅಷ್ಟೇ ಅಲ್ಲದೇ ಹಿಂದೂತ್ವದ ಬಗ್ಗೆ ಸ್ವಾಮಿ ವಿವೇಕಾನಂದರು ಏನು ಹೇಳಿದ್ದಾರೆ ತಿಳಿದುಕೊಂಡು ಬಾ ..ಇಲ್ಲ ಓದಿಕೊಂಡು ಅಧ್ಯಯನ ಮಾಡಕೊಂಡು ಬಾ ಎಂದು ಪಾಠ ಮಾಡಿದರು.

ಬಿಜೆಪಿ ಯ ಈ  ಮೂವರು ನಾಯಕರಿಗೆ ಅವರದ್ದೆಯಾದ ಶೈಲಿಯಲ್ಲಿ ಸಿದ್ದರಾಮಯ್ಯ ಕುಟುಕಿದ್ದನ್ನು ಕಾಂಗ್ರೆಸ್ ಹೈ ಕಮಾಂಡ್ ಸೂಕ್ಷ್ಮವಾಗಿ ಗಮನಿಸಿದೆ.ಚುನಾವಣೆಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ನ್ನು ಬಹುಮತಕ್ಕೆ ತರುವಲ್ಲಿ ವಿಫಲರಾಗಿರಬಹುದು.ಆದರೆ ಈ ಬಿಜೆಪಿ ಯ ಮೂವರು ಡೈಲಾಗ್ ಡೆಲಿವರಿ ಬಾಯ್ಸ್ ಗಳಿಗೆ ಸೆಡ್ಡು ಹೊಡೆದಿದ್ದು ಮಾತ್ರ ಸಿದ್ದು.

ಪ್ರಧಾನಿ ಮೋದಿಗೆ ಅವರದ್ದೇಯಾದ ಶೈಲಿಯಲ್ಲಿ ಅಚ್ಛೆ ದಿನ್ , ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತ  ಅಣಕ ಮಾಡುವ ಮೂಲಕ ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ. ಇನ್ನೂ  ಭೃಷ್ಟಾಚಾರದ ಆರೋಪವಿರುವ  ಬಿಜೆಪಿ ಮುಖ್ಯಮಂತ್ರಿಗಳ ಭೃಷ್ಟಾಚಾರವನ್ನು ಕೆಣಕುವ ಮೂಲಕ ಮೋದಿಯ ಬಾಯಿ ಮುಚ್ಚಿಸಿ ಬಿಟ್ಟರು.

ಪ್ರಧಾನಿ ನೋಟ್ ನಿಷೇಧ ಮಾಡಿದ್ದು ಅವಿವೇಕತನದ ನಿರ್ಧಾರ ಎಂದು

ಅವರದ್ಣೆ ಪಕ್ಷದ ನಾಯಕರಾದ ಯಶವಂತ್ ಸಿನ್ಹಾ, ಶತ್ರುಘ್ನ‌ ಸಿನ್ಹಾ, ಅರುಣ್‌ ಶೌರಿ ನೀಡಿರುವ ಹೇಳಿಕೆಯನ್ನು ಪದೇ ಪದೇ ಪ್ರಸ್ತಾಪಿಸಿ ಮೋದಿಗೆ ಮುಜುಗುರ ತಂದಿಟ್ಟರು‌.

 

ಇನ್ನೂ ಹಣಕಾಸು ಆಯೋಗದ ಆಯ ವ್ಯಯಗಳ ಕನಿಷ್ಠ ಜ್ಞಾನವೂ ಅಮಿತ್ ಶಾ ಗೆ ಇಲ್ಲ ಮತ್ತು ರಾಜ್ಯಗಳಿಗೆ ನೀಡುವ ಅನುದಾನ ಕೇಳಲು ಅಮಿತ್ ಶಾ ಯಾರು ?  ಎಂದು ಪ್ರಶ್ನಿಸಿ ತಮ್ಮ ಆರ್ಥಿಕ ಜ್ಞಾನವನ್ನು ಪ್ರದರ್ಶನ ಮಾಡಿದ್ದು ಬಿಜೆಪಿ ಯ ಚಾಣಕ್ಯನನ್ನು ತಲೆ ತಿರುಗಿಸಿ ಬಿಟ್ಟಿತ್ತು.. ಅಲ್ಲದೇ ಅಮಿತ್ ಶಾ ಕೊಲೆ ಮಾಡಿ ಜೈಲಿಗೆ ಹೋಗಿ ಬಂದ ಕ್ರಿಮಿನಲ್. ಅಮಿತ್ ಶಾ ಗೆ ಕ್ರಿಮಿನಲ್ ತಂತ್ರಗಾರಿಕೆ ಬರುತ್ತೆ ಹೊರತು ನ್ಯಾಯಪರ, ಕಾನೂನು ಬದ್ಧವಾಗಿ ಯಾವುದೇ ತಂತ್ರಗಾರಿಕೆ ಸಾಧ್ಯವಿಲ್ಲ ಎಂದು ಚಾಣಕ್ಯನಿಗೆ ತಲೆ ಸುತ್ತು ಬರುವ ಹಾಗೆ ಚುನಾವಣಾ ಕಣದಲ್ಲಿ ಅಬ್ಬರಿಸಿದ್ದರು.

ಇನ್ನೂ ಯೋಗಿ ಆದಿತ್ಯನಾಥ ನಿಗೆ ಸೌಮ್ಯ ಹಿಂದೂತ್ವದ ಮೂಲಕವೇ‌ ಚಾಟಿ ಬೀಸಿದ್ದರು. ಬಿಜೆಪಿಯವರೇನೋ ಹಿಂದೂತ್ವ ನಾ ಗುತ್ತಿಗೆ ತೆಗೆದುಕೊಂಡಿದ್ದಾರಾ ? ನನ್ನ ಹೆಸರಿನಲ್ಲಿಯೂ ರಾಮ ಇದೆ ಎಂದು ಕುಟುಕಿದ್ದರು. ಅಷ್ಟೇ ಅಲ್ಲದೇ ಸ್ವಾಮಿ ವಿವೇಕಾನಂದರು ಹೇಳಿದ್ದ ಮಾತುಗಳನ್ನು ಯೋಗಿಗೆ ನೆನಪಿಸಿದ್ದರು.

ಪ್ರಮುಖವಾಗಿ ನಾವು ಬಿಜೆಪಿ ಯ  ಈ ಮೂವರು ಡೈಲಾಗ್ ಡೆಲಿವರಿ ಬಾಯ್ಸಗಳ ವಿಚಾರಕ್ಕೆ ಬಂದಾಗ ಇವರೆಲ್ಲರಿಗೂ ಅವರದ್ದೆಯಾದ ವಿಚಾರಗಳನುಸಾರವಾಗಿ ತಿವಿದಿದ್ದು ಸಿದ್ದರಾಮಯ್ಯ ಒಬ್ಬರೆ. ಹಾಗೆ ನೋಡಿದರೆ ಕಾಂಗ್ರೆಸ್ ನ ಅಧಿನಾಯಕಿ‌ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯಾಗಲಿ ಈ ಮೂವರಿಗೂ ತಿರುಗೇಟು ನೀಡಿದ್ದು ಕಡಿಮೆಯೇ. ಅದೂ ಅವರದ್ದೇ ಶೈಲಿಯಲ್ಲಿ ಟಾಂಗ್ ಕೊಡೋ ಕಲೆ ಎಲ್ಲರಿಗೂ ಬರಲ್ಲ. ಅದೂ ಸಿದ್ದರಾಮಯ್ಯನವರಿಗೆ ಕರಗತ ವಾಗಿ ಬಿಟ್ಟಿದೆ. ಈ ಕಾರಣಕ್ಕಾಗಿ ಕಾಂಗ್ರೆಸ್ ಹೈ ಕಮಾಂಡ್ ಸಿದ್ದರಾಮಯ್ಯ ನವರನ್ನು ೨೦೧೯ ರ ಲೋಕಸಭೆ ಚುನಾವಣೆಗೆ ಸ್ಟಾರ್ ಪ್ರಚಾರಕರನ್ನಾಗಿ ಮಾಡುವತ್ತ ಹೆಜ್ಜೆ ಇಟ್ಟಿದೆ.‌ ಸಿದ್ದರಾಮಯ್ಯ ಅವರ, ಅಚ್ಛೆ ದಿನ್ ಆಯೇಗಾ … ಸಬ್ ಕಾ ಸಾತ್ ಸಬ್ ಕಾ ವಿಕಾಸ್ .. ಈ ಡೈಲಾಗ್ ಉತ್ತರ ಭಾರತ ಹಾಗೂ ಹಿಂದಿವಾಲಾಗಳ ಪ್ರದೇಶದಲ್ಲಿ ವರ್ಕ್ ಔಟ್ ಆಗುವದರಲ್ಲಿ ಯಾವುದೇ ಸಂಶಯವಿಲ್ಲ. ಸಿದ್ದರಾಮಯ್ಯನವರ ಬಗ್ಗೆ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಅವರು ಆಗಿಂದಾಗ ಸಾಮಾಜಿಕ‌ ಜಾಲತಾಣದಲ್ಲಿ ಎಕ್ಟೀವ್ ಆಗಿರುವ ಬಗ್ಗೆ. ಟ್ವೀಟರ್ ನಲ್ಲಿ‌ ಬ್ಯುಸಿಯಾಗಿದ್ದ ಸಿದ್ದರಾಮಯ್ಯ  ಚುನಾವಣೆಯಲ್ಲಿ ಮೋದಿ, ಯೋಗಿ, ಅಮಿತ್ ಶಾ ಮಾಡಿದ ಪ್ರತಿ ಭಾಷಣಕ್ಕೂ ತಿರುಗೇಟು ನೀಡುವ ಮೂಲಕ ಗಮನ ಸೆಳೆದಿದ್ದರು. ಅಲ್ಲಿ ಪ್ರಮುಖವಾಗಿ ಪಂಜಾಬ್ ಬ್ಯಾಂಕ್ ಗೆ ವಂಚಿಸಿದ್ದ ಉದ್ಯಮಿ ನೀರವ್ ಮೋದಿ‌ ಪರಾರಿಯಾಗಲು ಎಷ್ಟು ಕಮೀಷನ್ ಪಡೆದಿದ್ರಿ ? ಎನ್ನುವ ಪ್ರಮುಖ ವಿಷಯಗಳಿಂದ ಎಲ್ಲವಕ್ಕೂ ಉತ್ತರ ಕೇಳಿ ಬಿಜೆಪಿ ರಾಷ್ಟ್ರೀಯ ನಾಯಕರ ಕಾಲೆಳೆದಿದ್ದರು.

ಬಿಜೆಪಿ ರಾಷ್ಟ್ರೀಯ ನಾಯಕರು / ಸಿದ್ದರಾಮಯ್

ಹಾಗೆ ನೋಡಿದರೆ‌ಈ ಚುನಾವಣೆಯಲ್ಲಿ ಕರ್ನಾಟಕದ ಬಿಜೆಪಿ ಗೆ ಜನರ ಮುಂದೆ ಹೋಗಲು ಮುಖವೇ ಇರಲಿಲ್ಲ. ಹಿಂದಿನ ೫ ವರ್ಷದಲ್ಲಿ ಬಿಜೆಪಿ ಹೇಳಿಕೊಳ್ಳುವಂತಹ ಯಾವುದೇ ಸಾಧನೆಯನ್ನು ಮಾಡಿರಲಿಲ್ಲ..ಮಾತೆತ್ತಿದ್ದರೆ ಬಿಜೆಪಿ ಮೋದಿ ಯವರ ಕಡೆ ಬೊಟ್ಟು ಮಾಡುತ್ತಿತ್ತು. ಕೇಂದ್ರ ಸರ್ಕಾರದ ಸಾಧನೆ ನೋಡಿ ಮತ ಕೊಡಿ. ಕೇಂದ್ರದಲ್ಲಿ ಮೋದಿ ಕೈ ಬಲ ಪಡಿಸಲು ಬಿಜೆಪಿ ಗೆ ಮತ ಕೊಡಿ ಎಂದು ರಾಜ್ಯ ಬಿಜೆಪಿ ನಾಯಕರು ಕೇಳಿಕೊಳ್ಳುತ್ತಿದ್ದರೆ ಹೊರತು ಅವರ ಘನಂಧಾರಿ ಕಾಮಗಾರಿಗಳ ಬಗ್ಗೆ ಹೇಳಿಕೊಳ್ಳಲು ಅವರಿಗೆ ಮುಖವೇ ಇರಲಿಲ್ಲ. ಹಾಗಾಗಿ ಬಿಜೆಪಿ ಗೆ ರಾಷ್ಟ್ರೀಯ ನಾಯಕರಾದ ಮೋದಿ, ಅಮಿತ್ ಶಾ, ಆದಿತ್ಯನಾಥ ಯೋಗಿ ಅನಿವಾರ್ಯವಾಯಿತು. ಇವರನ್ನು ಎದುರಿಸಬಲ್ಲ ಕಾಂಗ್ರೆಸ್ ನಾಯಕ ಯಾರೂ ಎನ್ನುತ್ತರುವಾಗಲೇ ಕಣ್ಣಿಗೆ ಕಂಡಿದ್ದು ಮುಖ್ಯಮಂತ್ರಿ ಸಿದ್ದರಾಮ್ಯ. ಹಾಗೆ ನೋಡಿದರೇ ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಆಢಳಿತ ವಿರೋಧಿ ಇರಲಿಲ್ಲ. ಅಷ್ಟೇ ಅಲ್ಲದೇ ಅವರು ಜಾರಿಗೆ ತಂದ ಅನ್ನ ಭಾಗ್ಯ ಯೋಜನೆಯನ್ನು ಸೋಮಾರಿ ಭಾಗ್ಯ ಎಂದು ಟೀಕೆ ಮಾಡಿದ್ದ ಬಿಜೆಪಿಗೆ ಆ ಯೋಜನೆ ಯಶಸ್ವಿಯಾದಾಗ ಅದು ಕೇಂದ್ರ ಸರ್ಕಾರದ ಅಕ್ಕಿ ಅಂತ ಹೆಮ್ಮೆ ಪಟ್ಟುಕೊಂಡರು. ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದ ಶಾದಿ ಭಾಗ್ಯವನ್ನು ಮೊದಲು ಇದೇ ಬಿಜೆಪಿ ಅಲ್ಪಸಂಖ್ಯಾತರ ಒಲೈಕೆ ಎಂದಿತ್ತು. ನಂತರ ಅದೇ ಬಿಜೆಪಿ‌ ದೇವರು ಮೋದಿಜಿ, ಇದೇ‌ ಭಾಗ್ಯವನ್ನು  ಶಾದಿ ಸುಗುಣ್ ಎಂದು ಜಾರಿ ಮಾಡಿದಾಗ ರಾಜ್ಯ ಬಿಜೆಪಿ ಸಲಾಮ್ ವಾಲೆ ಕುಮ್ ಸಿದ್ದರಾಮಣ್ಣ ಎಂದಿತು.

ಅಷ್ಟೇ ಏಕೆ? ಸಿದ್ದರಾಮಯ್ಯ ಇಂದಿರಾ ಕ್ಯಾಂಟಿನ್‌ ಯೋಜನೆ ತಂದಾಗ ಅದರ ಜನಪ್ರಿಯತೆ ಸಹಿಸದೇ ಮೊಸರಲ್ಲಿ ಕಲ್ಲು ಹುಡುಕೋಕೆ ಈ ಬಿಜೆಪಿ ಹೊರಟಿತು.ಅದಕ್ಕೆ ಕೆಲವು ಪುಳುಚ್ಚಾರ ಬ್ರಾಹ್ಮಣ್ಯ ಪತರ ಕರತನ್ನು, ಬಳಸಿಕೊಂಡಿತು..ಯಾವಾಗ ಅಂತರಾಷ್ಟ್ರೀಯ ವಾಹಿನಿ  ಇಂದಿರಾ ಕ್ಯಾಂಟಿನ್ ಬಗ್ಗೆ‌ ವರದಿ ಬಿತ್ತರಿಸಿದಾಗ ತೆಪ್ಪಗಾದ ಬಿಜೆಪಿ ಆಂಡ್ ಪುಳಚಾರು ಪರ್ತಕತ್ರರ ಗ್ಯಾಂಗ್ ಹೆಸರಿನ ಬಗ್ಗೆ ತಗಾದೆ ತೆಗಿತು. ಇಂದಿರಾ ಬದಲು ಅಂಬೇಡ್ಕರ‌ ಕ್ಯಾಂಟಿನ್ ಅಂತ ಹೆಸರಿಡಿ ಅಂತ ವರಾತ ಎಬ್ಬಿಸಿತು. ಇದೂ ಸಿ.ಎಮ್‌.ಸಿದ್ದರಾಮಯ್ಯನವರನ್ನು ಮತ್ತಷ್ಟು ಎತ್ತರಕ್ಕೇರಿಸಲು ಸಾಧ್ಯವಾಯಿತು.

ಸದನ ಶೂರ ಸಿದ್ದರಾಮಯ್ಯ

ಸಮಾಜವಾದಿ ನೆಲೆಯಿಂದ ಬಂದ ಸಿದ್ದರಾಮಯ್ಯ ಭಾಷಣ, ಸಂಭಾಷಣೆಯಲ್ಲಿ ಅತಿರಥ. ಸದನದಲ್ಲಿ ಮಾತನಾಡುವಾಗ ಎದುರಾಳಿಗಳನ್ನು ತಮ್ಮ‌ ಮಾತಿನ ಮೋಡಿಯಲ್ಲಿಯೆ ಕೆಡ್ಡಾ ಕೆ ಬೀಳಿಸುವ ಮಹಾರಥ. ವಿಧಾನಸಭೆಯಲ್ಲಿ ಮಾತನಾಡೀಕೆ ನಿಂತ್ರೆ , ಎ ಈಶ್ವರಪ್ಪ ನೀನು ಸುಮ್ನೀರು ಅಂತ‌ ಅಧಿಕಾರಯುತವಾದ ರೀತಿಯಲ್ಲಿಯೇ ಹೇಳುವ ಧೈರ್ಯವಂತ‌. ಬಸವರಾಜ ಹೊರಟ್ಟಿ ನೀನು ನಮನವನಪಾ, ಏ ಸೋಮಣ್ಣ ಮೊದಲು ನೀನು ನಮ್ಮವನೇ ಈಗ ಬಿಜೆಪಿ ಯವರ ಸೇರ್ಕೋಡಿದಿ ಸುಮನಿರೋ ಅಂತ ಗದರಿಸೋ ಚಾತಿ ಉಳ್ಳ ನಾಯಕ ಸಿದ್ದರಾಮಯ್ಯ.ಅಲ್ಲದೇ ಮುಖ್ಯಮಂತ್ರಿ ಇದ್ದಾಗ ಪ್ರತಿ ಅಧಿವೇಶನದಲ್ಲೂ ಬಿಜೆಪಿ ನ ಕಾಲೆಳೆಯುತ್ತಿದ್ದ ಸಿದ್ದರಾಮಯ್ಯ , ಬಿಜೆಪಿ ಜೊತೆ ಇರುವ ಗೋವಿಂದ ಕಾರಜೋಳ, ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ ಅಂತಹ ನಾಯಕರಿಗೆ, ನೀವೆಲ್ಲ ನಮ್ಮವರಪ್ಪ ಆ ಯಡಿಯೂರಪ್ಪನ, ಈಶ್ವರಪ್ಪನ ಮಾತು ನಂಬಬೇಡಿ . ಜನಸಂಘದ ಕಾಲದಿಂದಲೂ ಅವರು‌ ಅಧಿಕಾರಕ್ಕೆ ಬರ್ತೀವಿ ಅಂತಿದಾರೆ.ಅವರು ಯಾವತ್ತೂ ಅಧಿಕಾರಕ್ಕೆ ಬರೋಲ್ಲ ಅಂತ ಎಲ್ಲರನ್ನೂ ಏಕ ವಚನದಲ್ಲಿಯೇ ಸಂಬೋಧಿಸಿ ಕಾಲೆಳೆಯುತ್ತಿದ್ದರು.

ಹಾಗಾಗಿ ಸಿದ್ದರಾಮಯ್ಯ ಈ ಬಾರಿ ಸೋತಿದ್ದರೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಸ್ಟಾರ್ ಪ್ರಚಾರಕರಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.. ಬನೀಯಾ ಪಾರ್ಟಿಗೆ ಟಾಂಗ್ ಕೊಡೋಕೆ ಕರ್ನಾಟಕದ ಸಮಾಜವಾದಿ ಟಗರು ರೆಡಿಯಾಗಿದೆ. ನೋಡೋಣ ಎನಾಗುತ್ತೆ…

One thought on “ವಾರೆ ನೋಟಾ ಬಿರೈತೆ, ಲೋಕಸಭೆ ಎಲೆಕ್ಸಗನ್ ಗೆ ರೆಡಿಯಾಗೈತಿ ; ಮೋದಿ ಗೆ ಗುದ್ದಲು ಸಿದ್ದು ಎದ್ದು ನಿಂತರು…..

Leave a Reply

Your email address will not be published.

Social Media Auto Publish Powered By : XYZScripts.com