ಶಿವಮೊಗ್ಗ : ಆಟವಾಡಲು ಹೋಗಿ ಜಲಸಮಾಧಿಯಾದ ಮೂವರು ಮಕ್ಕಳು….

ಶಿವಮೊಗ್ಗ : ಆಟವಾಡಲು ಹೋಗಿ ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ತಮ್ಮಡಿಹಳ್ಳಿ ಗ್ರಾಮದ ಜಂಗಲಿಕೆರೆಯಲ್ಲಿ ನಡೆದಿದೆ.

ಮೃತ ಮಕ್ಕಳನ್ನು ವಸಂತ (12), ಅಜೇಯ್ (10), ಚಿರಂತ್ (11) ಎಂದು ಹೆಸರಿಸಲಾಗಿದೆ. ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದೆಡೆ ಮೃತ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದ್ದು, ತಾಯಿ ಅಸ್ವಸ್ಥರಾಗಿರುವುದಾಗಿ  ತಿಳಿದುಬಂದಿದೆ.

 

Leave a Reply

Your email address will not be published.