Football : ರೊನಾಲ್ಡೊ vs ಮೆಸ್ಸಿ – ಇಬ್ಬರಲ್ಲಿ ಯಾರು ಗ್ರೇಟ್.? ನೆಯ್ಮರ್ ನೀಡಿದ ಉತ್ತರವೇನು.?

ಪೋರ್ಚುಗಲ್ ದೇಶದ ಸ್ಟ್ರೈಕರ್ ಕ್ರಿಸ್ಟಿಯಾನೋ ರೋನಾಲ್ಡೊ ಹಾಗೂ ಅರ್ಜೆಂಟೀನಾದ ಲಿಯೊನಲ್ ಮೆಸ್ಸಿ ಫುಟ್ಬಾಲ್ ಜಗತ್ತಿನ ಮಹಾನ್ ಆಟಗಾರರೆನಿಸಿಕೊಂಡವರು. ಕ್ಲಬ್ ಫುಟ್ಬಾಲ್ ನಲ್ಲಿ ರೊನಾಲ್ಡೊ ರಿಯಲ್ ಮ್ಯಾಡ್ರಿಡ್ ಪರವಾಗಿ ಆಡಿದರೆ, ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ತಂಡದ ಸದಸ್ಯರಾಗಿದ್ದಾರೆ.

Image result for ronaldo vs messi

ಮೆಸ್ಸಿ ಹಾಗೂ ರೊನಾಲ್ಡೊ ಇವರಿಬ್ಬರಲ್ಲಿ ಯಾರು ಗ್ರೇಟ್..? ಎಂಬ ಚರ್ಚೆ ಫುಟ್ಬಾಲ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಒಂದು ರೀತಿಯಲ್ಲಿ ಅದು ಎಂದೂ ಮುಗಿಯದ ಚರ್ಚೆಯೆಂದೇ ಹೇಳಬೇಕು. ಏಕೆಂದರೆ ಇಬ್ಬರೂ ಆಟಗಾರರು ಪ್ರಪಂಚದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.

ರೊನಾಲ್ಡೊ ಹಾಗೂ ಮೆಸ್ಸಿ ಇಬ್ಬರಲ್ಲಿ ಯಾರು ಗ್ರೇಟ್ ಎಂಬ ಪ್ರಶ್ನೆಗೆ ಬ್ರೆಜಿಲ್ ಖ್ಯಾತ ಫುಟ್ಬಾಲ್ ಆಟಗಾರ ನೆಯ್ಮರ್ ಜೂನಿಯರ್ ಉತ್ತರಿಸಿದ್ದಾರೆ. ‘ ಇಬ್ಬರೂ ಸಹ ತಮ್ಮ ಪೀಳಿಗೆಯ ಶ್ರೇಷ್ಟ ಫುಟ್ಬಾಲ್ ಆಟಗಾರರಾಗಿದ್ದಾರೆ. ಬಾರ್ಸಿಲೊನಾ ತಂಡದಲ್ಲಿ ಮೆಸ್ಸಿ ಜೊತೆಗೆ ಆಡಿದ್ದು ನನ್ನ ಪಾಲಿಗೆ ಗೌರವದ ಸಂಗತಿ. ಆಟಗಾರನಾಗಿಯೂ, ವ್ಯಕ್ತಿಯಾಗಿಯೂ ಮೆಸ್ಸಿಯನ್ನು ನಾನು ಇಷ್ಟ ಪಡುತ್ತೇನೆ. ವೈಯಕ್ತಿಕವಾಗಿ ನನ್ನ ಮಟ್ಟಿಗೆ ಹೇಳುವುದಾದರೆ ಮೆಸ್ಸಿಯೇ ಬೆಸ್ಟ್ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com